ADVERTISEMENT

ಕ್ಯಾಥೊಲಿಕ್‌ ಬಿಷಪ್‌ಗಳ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2018, 19:47 IST
Last Updated 2 ಫೆಬ್ರುವರಿ 2018, 19:47 IST

ಬೆಂಗಳೂರು: ‘ಕ್ಯಾಥೊಲಿಕ್‌ ಚರ್ಚ್‌ಗಳು ದುರ್ಬಲ ವರ್ಗದ ಜನರ ಏಳಿಗೆಗಾಗಿ ಶ್ರಮಿಸುತ್ತಿವೆ. ಬಡ ಜನರ ಜತೆ ಉತ್ತಮ ಬಾಂಧವ್ಯ ಹೊಂದಿದೆ’ ಎಂದು ಮ್ಯಾನ್ಮಾರ್‌ನ ಬಿಷಪ್‌ ಕಾರ್ಡಿನಲ್‌ ಚಾರ್ಲ್ಸ್‌ ಬೊ ಎಸ್‌ಡಿಬಿ ತಿಳಿಸಿದರು.

ನಗರದಲ್ಲಿ ಶುಕ್ರವಾರ ನಡೆದ ಭಾರತದ ಕ್ಯಾಥೊಲಿಕ್‌ ಬಿಷಪ್‌ಗಳ ಸಮ್ಮೇಳನದಲ್ಲಿ (ಸಿಬಿಸಿಐ) ಮಾತನಾಡಿದರು.

‘ಭಾರತ ಇಂದು ಬಲಪಂಥೀಯ ಸಿದ್ಧಾಂತದಿಂದ ಅಪಾಯಕ್ಕೆ ಸಿಲುಕಿದೆ. ಅದು ದಮನಿತರ ವಿರುದ್ಧವಾಗಿದೆ. ಆತಂಕ ಮನೆ ಮಾಡಿದೆ. ನಾವೆಲ್ಲರೂ ಒಟ್ಟಾಗಿ ಅದರ ವಿರುದ್ಧ ಹೋರಾಡಬೇಕು. ದ್ವೇಷ ಭಾವನೆ ಹುಟ್ಟು ಹಾಕುವ ವಿಚಾರಗಳನ್ನು ವಿರೋಧಿಸಬೇಕು’ ಎಂದರು.

ADVERTISEMENT

ನೇಪಾಳದ ಬಿಷಪ್‌ ಗಿಯಾಂಬಟಿಸ್ಟಾ ಡಿಕ್ವಾಟ್ರೊ, ‘ಶಿಕ್ಷಣ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಕ್ಯಾಥೊಲಿಕ್‌ ಚರ್ಚ್‌ಗಳು ಉತ್ತಮ ಸೇವೆ ಸಲ್ಲಿಸುತ್ತಿದ್ದು, ಅದನ್ನು ಮುಂದುವರಿಸಿಕೊಂಡು ಹೋಗಬೇಕು’ ಎಂದರು.   ‌

ಬೆಂಗಳೂರಿನ ಆರ್ಚ್‌ ಬಿಷಪ್‌ ಬರ್ನಾರ್ಡ್‌ ಮೊರಾಸ್‌, ಸಿಬಿಸಿಐನ ಫಿಲಿಪೆ ನೇರಿ ಫೆರಾವೊ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.