ADVERTISEMENT

ಪಾಲಿಕೆಗೆ ಹೈದರಾಬಾದ್‌ ಮೇಯರ್‌ ಭೇಟಿ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2018, 19:42 IST
Last Updated 6 ಫೆಬ್ರುವರಿ 2018, 19:42 IST
ಯಡಿಯೂರು ವಾರ್ಡ್‌ನ ರಣಧೀರ ಕಂಠೀರವ ಉದ್ಯಾನದ ಬಗ್ಗೆ ಎನ್‌.ಆರ್‌.ರಮೇಶ್‌ ಅವರು ಬೊಂತು ರಾಮಮೋಹನ್‌ ಅವರಿಗೆ ವಿವರಿಸಿದರು.
ಯಡಿಯೂರು ವಾರ್ಡ್‌ನ ರಣಧೀರ ಕಂಠೀರವ ಉದ್ಯಾನದ ಬಗ್ಗೆ ಎನ್‌.ಆರ್‌.ರಮೇಶ್‌ ಅವರು ಬೊಂತು ರಾಮಮೋಹನ್‌ ಅವರಿಗೆ ವಿವರಿಸಿದರು.   

ಬೆಂಗಳೂರು: ಹೈದರಾಬಾದ್‌ ಮಹಾನಗರ ಪಾಲಿಕೆಯ ಮೇಯರ್‌ ಬೊಂತು ರಾಮಮೋಹನ್ ಹಾಗೂ ಮೂವರು ಸದಸ್ಯೆಯರು ನಗರಕ್ಕೆ ಮಂಗಳವಾರ ಭೇಟಿ ನೀಡಿ ಪಾಲಿಕೆಯ ಕಾರ್ಯವೈಖರಿಯನ್ನು ಅವಲೋಕಿಸಿದರು.

ಯಡಿಯೂರು ವಾರ್ಡ್‌ಗೆ ಭೇಟಿ ನೀಡಿದ ಅವರು ಅಲ್ಲಿನ ಧನ್ವಂತರಿ ವನ, ಸಂಜೀವಿನಿ ವನ, ವಾಯುವಿಹಾರ ಮಾರ್ಗ, ಮಾದರಿ ಪಾದಚಾರಿ ಮಾರ್ಗ, ರಣಧೀರ ಕಂಠೀರವ ಉದ್ಯಾನ, ಜೈವಿಕ ಅನಿಲ ಘಟಕ ಹಾಗೂ ಮಳೆನೀರು ಇಂಗು ಗುಂಡಿಗಳನ್ನು ವೀಕ್ಷಿಸಿದರು.

ಬಳಿಕ, ವಸಂತನಗರದಲ್ಲಿರುವ ಇಂದಿರಾ ಕ್ಯಾಂಟೀನ್‌ನ ಕೇಂದ್ರೀಕೃತ ಅಡುಗೆ ಮನೆಗೆ ಭೇಟಿ ನೀಡಿದರು. ಟೆಂಡರ್‌ ಶ್ಯೂರ್‌ ಮಾದರಿಯಲ್ಲಿ ಅಭಿವೃದ್ಧಿಪಡಿಸುತ್ತಿರುವ ಚರ್ಚ್‌ಸ್ಟ್ರೀಟ್‌ ರಸ್ತೆಯನ್ನು ವೀಕ್ಷಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.