ADVERTISEMENT

ಹೆಲಿಟ್ಯಾಕ್ಸಿ ಸೇವೆ ಶೀಘ್ರ ಆರಂಭ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2018, 20:22 IST
Last Updated 9 ಫೆಬ್ರುವರಿ 2018, 20:22 IST
ಹೆಲಿಟ್ಯಾಕ್ಸಿ
ಹೆಲಿಟ್ಯಾಕ್ಸಿ   

ಬೆಂಗಳೂರು: ಎಲೆಕ್ಟ್ರಾನಿಕ್‌ ಸಿಟಿ ಮತ್ತು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ನಡುವೆ ‘ಹೆಲಿ ಟ್ಯಾಕ್ಸಿ ಸೇವೆ’ (ಹೆಲಿಕಾಪ್ಟರ್‌ ಶಟಲ್‌ ಸೇವೆ) ಇನ್ನೊಂದು ವಾರದಲ್ಲಿ ಆರಂಭವಾಗಲಿದೆ.

ಈ ಸೇವೆಯನ್ನು ನೀಡುವ ಥುಂಬಿ ಏವಿಯೇಷನ್‌ ಪ್ರೈವೇಟ್‌ ಲಿಮಿಟೆಡ್‌ ಕಂಪನಿಯು ಟಿಕೆಟ್‌ ಮುಂಗಡ ಕಾಯ್ದಿರಿಸುವಿಕೆಗಾಗಿ ಮೊಬೈಲ್‌ ಆ್ಯಪ್‌
ಅಭಿವೃದ್ಧಿಪಡಿಸಿದೆ. ಇನ್ನೊಂದು ವಾರದಲ್ಲಿ ಇದು ಬಳಕೆಗೆ ಲಭ್ಯವಾಗಲಿದೆ.

ನಗರದ ಪೂರ್ವ ಮತ್ತು ದಕ್ಷಿಣ ಭಾಗದಲ್ಲಿರುವವರು ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುವ ಸಮಯ ಈ ಹೆಲಿಟ್ಯಾಕ್ಸಿಯಿಂದಾಗಿ ಕಡಿಮೆಯಾಗಲಿದೆ. ಎಲೆ
ಕ್ಟ್ರಾನಿಕ್‌ ಸಿಟಿಯಿಂದ ವಿಮಾನ ನಿಲ್ದಾಣ ತಲುಪಲು ಈಗ ಸರಾಸರಿ ಎರಡೂವರೆ ಗಂಟೆ ಬೇಕಾಗುತ್ತಿದೆ. ಹೆಲಿ ಟ್ಯಾಕ್ಸಿಯಿಂದ ಕೇವಲ 15 ನಿಮಿಷಗಳಲ್ಲಿ ತಡೆರಹಿತವಾಗಿ ವಿಮಾನ ನಿಲ್ದಾಣ ತಲುಪಬಹುದು.

ADVERTISEMENT

‘ಉದ್ಯಮಿಗಳು, ಕಾರ್ಪೊರೇಟ್‌ ಪ್ರಯಾಣಿಕರು ಹಾಗೂ ತುರ್ತು ವೈದ್ಯಕೀಯ ಚಿಕಿತ್ಸೆಯ ಅಗತ್ಯವಿರುವವರಿಗೆ ಹೆಲಿಟ್ಯಾಕ್ಸಿ ಪ್ರಯೋಜನಕಾರಿ. ಕೈಗೆಟಕುವ ದರದಲ್ಲಿ ಸೇವೆ ಒದಗಿಸುವುದು ನಮ್ಮ ಗುರಿ’ ಎಂದು ಕಂಪನಿ ನಿರ್ದೇಶಕ ಕೆ.ಎನ್‌.ಜಿ. ನಾಯರ್‌ ತಿಳಿಸಿದರು.

‘ಐಐಐಟಿ ಆವರಣದ ಬಳಿಯ ನೆಲದ ಮೇಲಿನ ಹೆಲಿಪ್ಯಾಡನ್ನು ಆಯ್ಕೆ ಮಾಡಿದ್ದೇವೆ. ಇದು ಬಸ್‌ ನಿಲ್ದಾಣದ ಸಮೀಪದಲ್ಲಿರುವ ಈ ತಾಣ ಭವಿಷ್ಯದಲ್ಲಿ  ಮೆಟ್ರೊ ನಿಲ್ದಾಣಕ್ಕೂ ಹತ್ತಿರವಾಗುತ್ತದೆ. ಕ್ರಮೇಣ ಎಚ್‌ಎಎಲ್‌ ಮತ್ತು ವೈಟ್‌ ಫೀಲ್ಡ್‌ನಿಂದಲೂ ಸೇವೆ ಆರಂಭಿಸುವ ಉದ್ದೇಶ ಹೊಂದಿದ್ದೇವೆ’ ಎಂದರು.

ಇಬ್ಬರು ಪೈಲಟ್‌ಗಳು ಹಾಗೂ 6 ರಿಂದ 13 ಪ್ರಯಾಣಿಕರು ಪ್ರಯಾಣಿಸಬಹುದಾದ ಬೆಲ್‌– 412 ಮಾದರಿ ಹೆಲಿಕಾಪ್ಟರ್‌ ಮತ್ತು ಐವರು ಪ್ರಯಾಣಿಸುವ ಸಾಮರ್ಥ್ಯದ ಬೆಲ್‌ –405 ಮಾದರಿ ಹೆಲಿಕಾಪ್ಟರ್‌ಗು ಈ ಸೇವೆಗಾಗಿ ಬಳಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.