ADVERTISEMENT

‘ಗಡಿಯಲ್ಲಿ ಮಡಿದವರಿಗಿಂತ ಎಸ್‌ಟಿಪಿಯಲ್ಲಿ ಸತ್ತವರೇ ಹೆಚ್ಚು’

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2018, 19:45 IST
Last Updated 18 ಫೆಬ್ರುವರಿ 2018, 19:45 IST

ಬೆಂಗಳೂರು: ‘ಕಳೆದ ವರ್ಷ ಗಡಿಯಲ್ಲಿ  ಹಾಗೂ ಉಗ್ರರ ವಿರುದ್ಧ ಹೋರಾಡಿ 54 ಯೋಧರು ಸಾವಿಗೀಡಾದರೆ, ತ್ಯಾಜ್ಯ ನೀರು ಸಂಸ್ಕರಣಾ ಘಟಕ (ಎಸ್‌ಟಿಪಿ) ಶುದ್ಧೀಕರಿಸುವಾಗ 90 ಜನರು ಮೃತಪಟ್ಟಿದ್ದಾರೆ’ ಎಂದು ವಿಜ್ಞಾನ ಲೇಖಕ ನಾಗೇಶ್ ಹೆಗಡೆ ಹೇಳಿದರು.

ದೇವಗೀತಂ ಚಾರಿಟಬಲ್‌ ಟ್ರಸ್ಟ್‌ ನಗರದಲ್ಲಿ ಭಾನುವಾರ ಆಯೋಜಿಸಿದ್ದ  ನಾರಾಯಣದತ್ತ ಸ್ಮಾರಕ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಮಂಗಳ ಗ್ರಹದಲ್ಲಿ ಯಾವ ಅನಿಲಗಳಿವೆ, ಮಿಥೇನ್‌ ಪ್ರಮಾಣ ಎಷ್ಟಿದೆ ಎಂಬುದನ್ನು ತಿಳಿಯಲು ಗಗನನೌಕೆ ಕಳುಹಿಸಿದ್ದೇವೆ. ಆದರೆ, ಎಸ್‌ಟಿಪಿಯಲ್ಲಿ ಮಿಥೇನ್‌ ಪ್ರಮಾಣ ಎಷ್ಟಿದೆ ಎಂದು ತಿಳಿಯಲು ಸಾಧ್ಯವಾಗುತ್ತಿಲ್ಲ.  103 ವರ್ಷಗಳ ಹಿಂದೆ ಸರ್‌ ಹಂಫ್ರಿ ಡೇವಿ ಅವರು ವಿಷಾನಿಲ ಪತ್ತೆ ಮಾಡಲು ‘ಡೇವೀ ದೀಪ’ ಕಂಡು ಹಿಡಿದಿದ್ದರು. ಭೂಮಿಯೊಳಗೆ ಆ ದೀಪವನ್ನು ಇಳಿಸಿದಾಗ, ವಿಷಾನೀಲ ಇದ್ದರೆ ಅದು ಆರಿ ಹೋಗುತ್ತದೆ. ಇಂತಹ ಪರಿಕರ ಲಭ್ಯವಿದ್ದರೂ ಬಳಸುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

‘ಕರಾವಳಿ ಜಿಲ್ಲೆಗಳಲ್ಲಿ ಎಂಡೋಸಲ್ಫಾನ್‌ ಸಿಂಪಡಣೆಯಿಂದ ಅನೇಕರ ಬದುಕು ಶೋಚನೀಯವಾಯಿತು. ಆದರೆ, ಇಂದಿಗೂ ಈ ರಾಸಾಯನಿಕ
ವನ್ನು ನಿಷೇಧ ಮಾಡಿಲ್ಲ’ ಎಂದರು.

‘ಆಚಾರ್ಯ ಸಂಪಾದಕ ಶ್ರೀ ನಾರಾಯಣ ದತ್ತ’ ಕೃತಿಯನ್ನು ಬಿಡುಗಡೆ ಮಾಡಲಾಯಿತು. ಪತ್ರಕರ್ತ ನಾರಾಯಣ ದತ್ತ ಅವರ ಲೇಖನಗಳು, ಉಪನ್ಯಾಸಗಳು ಹಾಗೂ ಅವರ ಕುರಿತ ಲೇಖನಗಳು ಈ ಪುಸ್ತಕದಲ್ಲಿವೆ. ಈ ಕೃತಿಯನ್ನು ನಿವೃತ್ತ ಹಿಂದಿ ಪ್ರಾಧ್ಯಾಪಕ ಡಾ.ಜಿ.ಭಾಸ್ಕರ ಮಯ್ಯ ಕನ್ನಡಕ್ಕೆ ಅನುವಾದಿಸಿದ್ದಾರೆ.

***

ಕೃತಿ: ಆಚಾರ್ಯ ಸಂಪಾದಕ ಶ್ರೀ ನಾರಾಯಣ ದತ್ತ

ಪ್ರಕಾಶನ: ಅಭಿನವ

ಮೂಲ ಲೇಖಕ (ಹಿಂದಿ): ವಿಜಯದತ್ತ ಶ್ರೀಧರ

ಪುಟಗಳು: 280

ಬೆಲೆ: ₹ 250

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.