ADVERTISEMENT

ಎಸಿಬಿ ಹೆಸರಿನಲ್ಲಿ ₹1.50 ಲಕ್ಷ ವಸೂಲಿ: ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2022, 20:21 IST
Last Updated 15 ಏಪ್ರಿಲ್ 2022, 20:21 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಡಿವೈಎಸ್ಪಿ ಹೆಸರಿನಲ್ಲಿ ತುಮಕೂರು ಬೆಸ್ಕಾಂ ಕಚೇರಿ ಅಧೀಕ್ಷಕ ಎಂಜಿನಿಯರ್ ಗುರುಸ್ವಾಮಿ ಅವರಿಂದ ₹ 1.50 ಲಕ್ಷ ವಸೂಲಿ ಮಾಡಲಾಗಿದ್ದು, ಈ ಬಗ್ಗೆ ಹೈಗ್ರೌಂಡ್ಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಗುರುಸ್ವಾಮಿ ಅವರು ದೂರು ಕೊಟ್ಟಿದ್ದಾರೆ. ಅಪರಿಚಿತರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಗುರುಸ್ವಾಮಿ ಅವರಿಗೆ ಮಾರ್ಚ್ 31ರಂದು ಕರೆ ಮಾಡಿದ್ದ ಆರೋಪಿ, ‘ನಾನು ಬೆಂಗಳೂರು ಎಸಿಬಿ ಕಚೇರಿ ಡಿವೈಎಸ್ಪಿ. ನಿಮ್ಮ ವಿರುದ್ಧ ಭ್ರಷ್ಟಾಚಾರ ಆರೋಪವಿದ್ದು, ಶೀಘ್ರದಲ್ಲಿ ದಾಳಿ ಮಾಡ
ಲಾಗುವುದು. ಈ ರೀತಿ ಮಾಡಬಾರದು ಎಂದರೆ ₹ 1.50 ಲಕ್ಷ ನೀಡಬೇಕು ಎಂದಿದ್ದ’. ಆತನ ಮಾತು ನಂಬಿದ್ದ ಗುರುಸ್ವಾಮಿ, ಖಾತೆಗೆ ಹಣ ಜಮೆ ಮಾಡಿದ್ದರು’ ಎಂದೂ ತಿಳಿಸಿವೆ. ‘ಇತ್ತೀಚೆಗೆ ಪುನಃ ₹ 50,000 ಆರೋಪಿ ಬೇಡಿಕೆ ಇರಿಸಿದ್ದ. ಅನುಮಾನಗೊಂಡ ಗುರುಸ್ವಾಮಿ, ಪರಿಚಯಸ್ಥರ ಮೂಲಕ ಎಸಿಬಿ ಕಚೇರಿಯಲ್ಲಿ ವಿಚಾರಿಸಿದ್ದರು. ಯಾರೊಬ್ಬರೂ ಕರೆ ಮಾಡಿಲ್ಲವೆಂಬುದು ಗೊತ್ತಾಗಿತ್ತು. ಬಳಿಕ ಠಾಣೆಗೆ ಬಂದು ದೂರು ನೀಡಿದ್ದಾರೆ’ ಎಂದು ಹೇಳಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.