ADVERTISEMENT

ಇತಿಹಾಸದಲ್ಲಿ ಅಹಲ್ಯಾಬಾಯಿ ಹೋಳ್ಕರ್ ಕಡೆಗಣನೆ: ಸಿದ್ದರಾಮನಂದಪುರಿ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 31 ಮೇ 2020, 20:37 IST
Last Updated 31 ಮೇ 2020, 20:37 IST
ಕಾರ್ಯಕ್ರಮದಲ್ಲಿ ಸಿದ್ದರಾಮನಂದಪುರಿ ಸ್ವಾಮೀಜಿ, ಅಹಲ್ಯಾಬಾಯಿ ಹೋಳ್ಕರ್ ಮಹಿಳಾ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷೆ ಪ್ರಭಾವತಿ, ವಿಜಯಲಕ್ಷ್ಮಿ ಪರಮೇಶ್, ಮಹಿಳಾ ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ಶಶಿಕಲಾ, ನಾಗಲಕ್ಷ್ಮಿ, ರಾಜೇಶ್ವರಿ, ವಚನಾ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಸಿದ್ದರಾಮನಂದಪುರಿ ಸ್ವಾಮೀಜಿ, ಅಹಲ್ಯಾಬಾಯಿ ಹೋಳ್ಕರ್ ಮಹಿಳಾ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷೆ ಪ್ರಭಾವತಿ, ವಿಜಯಲಕ್ಷ್ಮಿ ಪರಮೇಶ್, ಮಹಿಳಾ ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ಶಶಿಕಲಾ, ನಾಗಲಕ್ಷ್ಮಿ, ರಾಜೇಶ್ವರಿ, ವಚನಾ ಭಾಗವಹಿಸಿದ್ದರು.   

ಬೆಂಗಳೂರು: 'ಹಿಂದುಳಿದ ಹೆಣ್ಣು ಮಗಳು ಹಾಗೂ ವಿಧವೆ ಎನ್ನುವ ಕಾರಣಕ್ಕೆಅಹಲ್ಯಾಬಾಯಿ ಹೋಳ್ಕರ್ ಅವರನ್ನು ಇತಿಹಾಸದಲ್ಲಿ ಮುಚ್ಚಿ ಹಾಕುವ ಪ್ರಯತ್ನ ನಡೆಯುತ್ತಿದೆ. ನಾವು ಹಾಗೂ ಅವರ ವಾರಸುದಾರರು ಅಹಲ್ಯಾಬಾಯಿ ಅವರನ್ನು ಪರಿಚಯಿಸುವ ಕೆಲಸ ಮಾಡಬೇಕಿದೆ' ಎಂದು ಕಾಗಿನೆಲೆ ಕನಕ ಗುರುಪೀಠದ ಕಲಬುರ್ಗಿ ವಿಭಾಗದ ಸಿದ್ದರಾಮನಂದಪುರಿ ಸ್ವಾಮೀಜಿ ತಿಳಿಸಿದರು.

ಶ್ರೀನಗರದ ಕನಕದಾಸರ ಮಠದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಅಹಲ್ಯಾಬಾಯಿ ಹೋಳ್ಕರ್ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿದರು.

'ಭಾರತೀಯ ಇತಿಹಾಸದಲ್ಲಿ ಆಳ್ವಿಕೆ ನಡೆಸಿದ ರಾಣಿಯರಲ್ಲಿ ಅಹಲ್ಯಾಬಾಯಿ ಅವರು ಮೊದಲ ಪಂಕ್ತಿಗೆ ಸೇರುತ್ತಾರೆ. ಎಲ್ಲ ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಗೆ ಅವರು ಶ್ರಮಿಸಿದ್ದಾರೆ. ಹಿಂದೂ ಧರ್ಮಕ್ಕೆ ಕೊಡುಗೆ ಅಪಾರ. ಹೆಸರಿಲ್ಲದ ಸಣ್ಣಪುಟ್ಟ ಸಾಧಕರನ್ನು 'ದೇಶದ ರಕ್ಷಕರು, ಜಗತ್ತಿನ ಸೇವಕರು' ಎಂದು ಅಬ್ಬರದ ಪ್ರಚಾರ ನೀಡುತ್ತೇವೆ. ಜಾತಿಯನ್ನು ನೋಡಿ ಪ್ರಚಾರ ಮಾಡುವ ವ್ಯವಸ್ಥೆ ಇಂದಿಗೂ ಜೀವಂತ' ಎಂದರು.

ADVERTISEMENT

ವಿಧಾನ ಪರಿಷತ್ ಸದಸ್ಯ ಎಚ್.ಎಂ.ರೇವಣ್ಣ,' ಪುರುಷ ಪ್ರಧಾನ ದೇಶದಲ್ಲಿ ಒಬ್ಬ ಮಹಿಳೆಯಾಗಿ ಅಹಲ್ಯಾಬಾಯಿ ಹೋಳ್ಕರ್ ಅವರ ಸಾಧನೆ ಅಪಾರ. ಹಲವು ಧಾರ್ಮಿಕ ಸ್ಥಳಗಳಲ್ಲಿ ಈಗಲೂ ಅವರ ಸಾಧನೆಗಳ ಕುರುಹುಗಳಿವೆ. ಮುಂದಿನ ದಿನಗಳಲ್ಲಿ ಅವರ ಸಾಧನೆಗಳು ಎಲ್ಲರಿಗೂ ತಲುಪಬೇಕು' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.