ADVERTISEMENT

ಏರ್‌ ಶೋ: ಮಾಂಸ ಮಾರಾಟ ನಿಷೇಧ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2023, 19:31 IST
Last Updated 4 ಫೆಬ್ರುವರಿ 2023, 19:31 IST
   

ಬೆಂಗಳೂರು: ಯಲಹಂಕ ವಾಯು ನೆಲೆಯಲ್ಲಿ ನಡೆಯಲಿರುವ ಅಂತರರಾಷ್ಟ್ರೀಯ ಮಟ್ಟದ ‘ಏರೋ ಇಂಡಿಯಾ–2023’ ಪ್ರದರ್ಶನದ ಅಂಗವಾಗಿ 10 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಮಾಂಸ ಮಾರಾಟವನ್ನು ಫೆ.20ರವರೆಗೆ ಬಿಬಿಎಂಪಿ ನಿಷೇಧಿಸಿದೆ. ಅಲ್ಲದೇ, ಮಾಂಸಾಹಾರಿ ಹೋಟೆಲ್‌ ತೆರೆಯಲು ಷರತ್ತುಬದ್ಧ ಅನುಮತಿ ನೀಡಿದೆ.

ಫೆ.13ರಿಂದ 17ರವರೆಗೆ ನಡೆಯಲಿರುವ ಪ್ರದರ್ಶನದ ಸಂದರ್ಭದಲ್ಲಿ ಹಕ್ಕಿಗಳ ಹಾರಾಟ ತಡೆಯುವ ಸಲುವಾಗಿ ವಿಂಗ್ ಕಮಾಂಡರ್ ಅವರ ಮನವಿಯಂತೆ ಈ ಕ್ರಮ ಕೈಗೊಳ್ಳಲಾಗಿದೆ.

ಮಾಂಸಾಹಾರಿ ಹೋಟೆಲ್‌ಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಸಾರ್ವಜನಿಕವಾಗಿ ಬಿಸಾಡದೆ ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕು. ನಿಯಮ ಉಲ್ಲಂಘಿಸಿದರೆ ಬಿಬಿಎಂಪಿ ಕಾಯ್ದೆ ಮತ್ತು ಭಾರತೀಯ ಏರ್‌ಕ್ರಾಫ್ಟ್ ನಿಯಮಗಳ ಪ್ರಕಾರ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.