ADVERTISEMENT

ಆಕಾಶವಾಣಿ ನೌಕರರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2018, 19:23 IST
Last Updated 1 ಆಗಸ್ಟ್ 2018, 19:23 IST
ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ನೌಕರರು
ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ನೌಕರರು   

ಬೆಂಗಳೂರು: ‘ಉದ್ಯೋಗದಲ್ಲಿ ಬಡ್ತಿ ನೀಡಲು ವಿಳಂಬ ಧೋರಣೆ ಅನುಸರಿಸಲಾಗುತ್ತಿದೆ’ ಎಂದು ಆರೋಪಿಸಿ ಆಕಾಶವಾಣಿ ಹಾಗೂ ದೂರದರ್ಶನ ನೌಕರರು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.

ರಾಜಭವನ ರಸ್ತೆಯಲ್ಲಿರುವ ಆಕಾಶವಾಣಿ ಕಚೇರಿ ಎದುರು ಸೇರಿದ್ದ ನೌಕರರು, ‘ಉಳಿಸಿ ಉಳಿಸಿ ಆಕಾಶವಾಣಿ, ದೂರದರ್ಶನ ಉಳಿಸಿ’ ಎಂಬ ಘೋಷಣೆಯುಳ್ಳ ಫಲಕ ಪ್ರದರ್ಶಿಸಿದರು.

ನೌಕರ ಎಸ್. ಬಸವರಾಜ್, ‘ಕಾರ್ಯಕ್ರಮ ಸಿದ್ಧಪಡಿಸಲು ಸೂಕ್ತ ಅನುದಾನವನ್ನು ನೀಡುತ್ತಿಲ್ಲ. ಜತೆಗೆ, ನೌಕರರ ಬೇಡಿಕೆಗಳಿಗೆ ಸ್ಪಂದಿಸುತ್ತಿಲ್ಲ’ ಎಂದರು.

ADVERTISEMENT

‘ಭಾರತೀಯ ಪ್ರಸಾರ ಸೇವೆಯಲ್ಲಿ 810 ಉನ್ನತ ಹುದ್ದೆಗಳಿವೆ. ಕಾಯಂ ಆಗಿ 8 ಹಾಗೂ ಪ್ರಭಾರಿಯಾಗಿ 260 ಮಂದಿ ಮಾತ್ರ ಕೆಲಸದಲ್ಲಿದ್ದಾರೆ. ಖಾಲಿ ಇರುವ ಹುದ್ದೆಗಳ ಭರ್ತಿಗೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.