ADVERTISEMENT

‘ಅಮೆಜಾನ್‌ ಇಂಡಿಯಾ’ ನಂಬಿ ₹ 1.49 ಲಕ್ಷ ಕಳೆದುಕೊಂಡ

​ಪ್ರಜಾವಾಣಿ ವಾರ್ತೆ
Published 17 ಮೇ 2021, 3:31 IST
Last Updated 17 ಮೇ 2021, 3:31 IST

ಬೆಂಗಳೂರು: ‘ಅಮೆಜಾನ್ ಇಂಡಿಯಾ’ ಕಂಪನಿಯಿಂದ ಉಡುಗೊರೆ ಬಂದಿರುವುದಾಗಿ ಹೇಳಿ ನಗರದ ಯುವತಿಯೊಬ್ಬರಿಂದ ₹ 1.49 ಲಕ್ಷ ಪಡೆದು ವಂಚಿಸಲಾಗಿದ್ದು, ಈ ಸಂಬಂಧ ಈಶಾನ್ಯ ವಿಭಾಗದ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ದೇವನಹಳ್ಳಿ ನಿವಾಸಿಯಾಗಿರುವ 25 ವರ್ಷದ ಯುವತಿ ವಂಚನೆ ಬಗ್ಗೆ ದೂರು ನೀಡಿದ್ದಾರೆ. ಅಪರಿಚಿತರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಮೇ 7ರಂದು ದೂರುದಾರರ ಮೊಬೈಲ್‌ಗೆ ಕರೆ ಮಾಡಿದ್ದ ಆರೋಪಿ, ಅಮೆಜಾನ್ ಇಂಡಿಯಾ ಕಂಪನಿ ಪ್ರತಿನಿಧಿಯೆಂದು ಪರಿಚಯಿಸಿಕೊಂಡಿದ್ದ. ‘ನಮ್ಮ ಕಂಪನಿಯಿಂದ ನಿಮಗೆ ಉಡುಗೊರೆ ಬಂದಿದೆ. ಅದನ್ನು ನಿಮ್ಮ ವಿಳಾಸಕ್ಕೆ ಸದ್ಯದಲ್ಲೇ ಕಳುಹಿಸಲಿದ್ದೇವೆ. ಅದಕ್ಕೆ ಕೆಲ ಶುಲ್ಕಗಳನ್ನು ಪಾವತಿಸಬೇಕು’ ಎಂದೂ ಆರೋಪಿ ಹೇಳಿದ್ದ.’

ADVERTISEMENT

‘ಆರೋಪಿ ಮಾತು ನಂಬಿದ್ದ ಯುವತಿ, ಆತನ ನೀಡಿದ್ದ ಸಂಖ್ಯೆಗೆ ಗೂಗಲ್ ಪೇ ಮೂಲಕ ಹಂತ ಹಂತವಾಗಿ ₹ 1.49 ಲಕ್ಷ ಪಾವತಿಸಿದ್ದರು. ಅದಾದ ನಂತರ ಆರೋಪಿಗಳು ನಾಪತ್ತೆಯಾಗಿದ್ದಾರೆ’ ಎಂದೂ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.