ADVERTISEMENT

ಕೆಎಂಎಫ್‌ಗೆ ಆಂಧ್ರಪ್ರದೇಶದ ಸಚಿವೆ ಭೇಟಿ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2022, 19:48 IST
Last Updated 17 ಸೆಪ್ಟೆಂಬರ್ 2022, 19:48 IST
ಆಂಧ್ರಪ್ರದೇಶದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಉಷಾ ಶ್ರೀಚರಣ್ (ಎಡದಿಂದ ಮೂರನೇಯವರು) ಕೆಎಂಎಫ್ ಕೇಂದ್ರ ಕಚೇರಿಗೆ ಶನಿವಾರ ಭೇಟಿ ನೀಡಿದರು. ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಬಿ.ಸಿ. ಸತೀಶ್ ಇದ್ದರು
ಆಂಧ್ರಪ್ರದೇಶದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಉಷಾ ಶ್ರೀಚರಣ್ (ಎಡದಿಂದ ಮೂರನೇಯವರು) ಕೆಎಂಎಫ್ ಕೇಂದ್ರ ಕಚೇರಿಗೆ ಶನಿವಾರ ಭೇಟಿ ನೀಡಿದರು. ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಬಿ.ಸಿ. ಸತೀಶ್ ಇದ್ದರು   

ಬೆಂಗಳೂರು: ಆಂಧ್ರಪ್ರದೇಶದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಉಷಾ ಶ್ರೀಚರಣ್ ಕರ್ನಾಟಕ ಹಾಲು ಮಹಾಮಂಡಳದ (ಕೆಎಂಎಫ್‌) ಕೇಂದ್ರ ಕಚೇರಿಗೆ ಶನಿವಾರ ಭೇಟಿ ನೀಡಿ ಒಕ್ಕೂಟದ ಕಾರ್ಯಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆದರು.

ಕೆಎಂಎಫ್‌ನೊಂದಿಗೆ ಉತ್ತಮ ಬಾಂಧವ್ಯ ಮುಂದುರಿಸುವುದು ಮತ್ತು ಹಾಲಿನ ಸರಬರಾಜು ಕುರಿತು ಚರ್ಚಿಸುವ ಉದ್ದೇಶದಿಂದ ಅವರು ಈ ಭೇಟಿ ನೀಡಿದ್ದರು.

ಆಂಧ್ರಪ್ರದೇಶದಲ್ಲಿ ‘ವೈಎಸ್‌ಆರ್ ಸಂಪೂರ್ಣ ಪೋಷಣ ಯೋಜನೆ’ ಅಡಿಯಲ್ಲಿ ಪ್ರತಿ ತಿಂಗಳು 1 ಕೋಟಿ ಲೀಟರ್‌ ಹಾಲು ಸರಬರಾಜು ಮಾಡಲಾಗುತ್ತಿದೆ.

ADVERTISEMENT

ಆಂಧ್ರಪ್ರದೇಶದಲ್ಲಿ ವೈಎಸ್‌ಆರ್ ಸಂಪೂರ್ಣ ಪೋಷಣ ಯೋಜನೆಯನ್ನು 2016ರಲ್ಲಿ ಆರಂಭಿಸಲಾಗಿದ್ದು,
ತಿಂಗಳಿಗೆ 13 ಲಕ್ಷ ಲೀಟರ್‌ ಹಾಲು ಪೂರೈಸಲಾಗುತ್ತಿತ್ತು. ಸದ್ಯ, 1 ಕೋಟಿ ಲೀಟರ್‌ ಹಾಲನ್ನು ಕೆಎಂಎಫ್‌ ವತಿ
ಯಿಂದ ಸರಬರಾಜು ಮಾಡಲಾಗುತ್ತಿದೆ. ಆ ರಾಜ್ಯದ 13 ಜಿಲ್ಲೆಗಳ 55,600 ಅಂಗನವಾಡಿ ಕೇಂದ್ರಗಳ 26 ಲಕ್ಷ ಫಲಾನುಭವಿಗಳು ಈ ಯೋಜನೆಯ ಲಾಭ ಪಡೆದುಕೊಳ್ಳುತ್ತಿದ್ದಾರೆ.

ಕೆಎಂಎಫ್‌ನ ನಂದಿನಿ ಯುಎಚ್‌ಟಿ ಹಾಲನ್ನು 200, 500 ಹಾಗೂ 1000 ಮಿಲಿ ಲೀಟರ್‌ ಟೆಟ್ರಾಪ್ಯಾಕ್ ಹಾಗೂ 200, 500 ಫ್ಲೆಕ್ಸಿ ಪೊಟ್ಟಣಗಳಲ್ಲಿ ಸರಬರಾಜು ಮಾಡಲಾಗುತ್ತಿದೆಎಂದು ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಬಿ.ಸಿ. ಸತೀಶ್ ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.