ADVERTISEMENT

ಎಸ್ಸೆಸ್ಸೆಲ್ಸಿ ಮರುಮೌಲ್ಯಮಾಪನ: ಅಂಕಿತಾಗೆ ಅಗ್ರಸ್ಥಾನ, ತುಳಸಿ, ಕಾವ್ಯ ದ್ವಿತೀಯ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2020, 17:52 IST
Last Updated 5 ಸೆಪ್ಟೆಂಬರ್ 2020, 17:52 IST
ಅಂಕಿತಾ 
ಅಂಕಿತಾ    

ಬೆಂಗಳೂರು:ಬೆಂಗಳೂರು ಉತ್ತರ ಶೈಕ್ಷಣಿಕ ಜಿಲ್ಲೆಯ ನಾಗಸಂದ್ರ ಬಳಿಯ ವಿಡಿಯಾ ಪೂರ್ಣಪ್ರಜ್ಞ ಪ್ರೌಢಶಾಲೆಯ ಅಂಕಿತಾ ಶ್ರೀನಾಥ್ ಗಾರ್ಗ್ಯ, ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕಗಳನ್ನು ಗಳಿಸುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾಳೆ. ಈ ಮೊದಲು, 623 ಅಂಕ ಗಳಿಸಿದ್ದಳು. ಇಂಗ್ಲಿಷ್‌ನಲ್ಲಿ 98 ಅಂಕ ಬಂದಿತ್ತು. ಮರುಮೌಲ್ಯಮಾಪನದ ನಂತರ, 100 ಅಂಕಗಳು ಬಂದಿವೆ.

ಬೆಂಗಳೂರಿನ→ಟಾಟಾ ಸಿಲ್ಕ್‌ ಫಾರ್ಮ್‌ನಲ್ಲಿನ ಶ್ರೀ ಕುಮಾರನ್‌ ಶಾಲೆಯ ವಿದ್ಯಾರ್ಥಿನಿ ತುಳಸಿ ಜಿ. ರಾಯಸ ಮತ್ತು ಶಿವಮೊಗ್ಗದ ಪ್ರಿಯದರ್ಶಿನಿ ಪ್ರೌಢಶಾಲೆಯ ವಿದ್ಯಾರ್ಥಿನಿ ಕಾವ್ಯ ಮರು ಮೌಲ್ಯಮಾಪನದ ನಂತರ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ತಲಾ 624 ಅಂಕ ಗಳಿಸುವ ಮೂಲಕ ರಾಜ್ಯಕ್ಕೆ ಎರಡನೇ ಸ್ಥಾನ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT