ADVERTISEMENT

ಎಪಿಎಂಸಿ ಪುನರ್‌ ಅಭಿವೃದ್ಧಿ: ಕೃಷಿ ಮಾರುಕಟ್ಟೆ ಸಚಿವ ಎಸ್.ಟಿ.ಸೋಮಶೇಖರ್

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2021, 3:54 IST
Last Updated 19 ಫೆಬ್ರುವರಿ 2021, 3:54 IST
ಎಪಿಎಂಸಿ ನವೀಕರಣ ಕಾಮಗಾರಿಗೆ ಎಸ್.ಟಿ.ಸೋಮಶೇಖರ್ ಚಾಲನೆ ನೀಡಿದರು. ಗ್ರಾಮಪಂಚಾಯಿತಿ ಅಧ್ಯಕ್ಷ ಟಿ.ಎಲ್.ಕೆಂಪೇಗೌಡ, ಗ್ರಾಮಪಂಚಾಯಿತಿ ಮಾಜಿ ಅಧ್ಯಕ್ಷ ಎಸ್.ಟಿ.ಕುಬೇರಸ್ವಾಮಿ, ಆರ್.ಲಕ್ಷ್ಮಯ್ಯ ಇದ್ದಾರೆ
ಎಪಿಎಂಸಿ ನವೀಕರಣ ಕಾಮಗಾರಿಗೆ ಎಸ್.ಟಿ.ಸೋಮಶೇಖರ್ ಚಾಲನೆ ನೀಡಿದರು. ಗ್ರಾಮಪಂಚಾಯಿತಿ ಅಧ್ಯಕ್ಷ ಟಿ.ಎಲ್.ಕೆಂಪೇಗೌಡ, ಗ್ರಾಮಪಂಚಾಯಿತಿ ಮಾಜಿ ಅಧ್ಯಕ್ಷ ಎಸ್.ಟಿ.ಕುಬೇರಸ್ವಾಮಿ, ಆರ್.ಲಕ್ಷ್ಮಯ್ಯ ಇದ್ದಾರೆ   

ರಾಜರಾಜೇಶ್ವರಿನಗರ: ‘ಮುಂದಿನ ಬಜೆಟ್ ನಂತರ ಅನುದಾನ ಲಭ್ಯತೆ ನೋಡಿಕೊಂಡು ಅವಶ್ಯವಿರುವ ಕಡೆ ಹಲವು ಎಪಿಎಂಸಿಗಳನ್ನು ಪುನರ್ ಅಭಿವೃದ್ಧಿಪಡಿಸಲಾಗುವುದು’ ಎಂದು ಕೃಷಿ ಮಾರುಕಟ್ಟಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.

ತಾವರೆಕೆರೆಯಲ್ಲಿ ಎಪಿಎಂಸಿ ಮಾರುಕಟ್ಟೆಯನ್ನು ₹2.70ಕೋಟಿ ವೆಚ್ಚದಲ್ಲಿ ಪುನರ್ ಅಭಿವೃದ್ಧಿ ಪಡಿಸುವ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಎಪಿಎಂಸಿ ಮೂಲಕ ರೈತರಿಗೆ ಉಪಯೋಗವಾಗುವಂತಹ ಕಾರ್ಯಕ್ರಮವನ್ನು ರೂಪಿಸಲಾಗುತ್ತಿದೆ ಎಂದರು.

ತಾವರೆಕೆರೆ ಗ್ರಾಮಪಂಚಾಯತಿ ಅಧ್ಯಕ್ಷ ಟಿ.ಎಲ್.ಕೆಂಪೇಗೌಡ, ‘ಇಲ್ಲಿನ ಮಾರುಕಟ್ಟೆಯನ್ನು ಅಭಿವೃದ್ಧಿ ಪಡಿಸಲು ಸಚಿವರು ತುರ್ತಾಗಿ ಅನುದಾನ ಬಿಡುಗಡೆ ಮಾಡಿಸಿದ್ದಾರೆ. ರೈತರಿಗೆ ಕುಡಿಯುವ ನೀರು, ಶೌಚಾಲಯ, ವಿಶ್ರಾಂತಿ ಗೃಹ, ಅಂಗಡಿ ಮಳಿಗೆ, ವಿದ್ಯುತ್, ವಿಶಾಲವಾದ ಪ್ರಾಂಗಣ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗಿದೆ’ ಎಂದು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.