ADVERTISEMENT

ಬೈಕ್ ಟ್ಯಾಕ್ಸಿ ನಿಷೇಧವನ್ನು ಮರುಪರಿಶೀಲಿಸಲು ಮನವಿ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2025, 15:35 IST
Last Updated 16 ಏಪ್ರಿಲ್ 2025, 15:35 IST
<div class="paragraphs"><p>ವಿಧಾನ ಸೌಧದ ಮುಂದೆ ಬೈಕ್ ಟ್ಯಾಕ್ಸಿ ಚಾಲಕಿಯರು</p></div>

ವಿಧಾನ ಸೌಧದ ಮುಂದೆ ಬೈಕ್ ಟ್ಯಾಕ್ಸಿ ಚಾಲಕಿಯರು

   

ಎಕ್ಸ್ ಚಿತ್ರ: @Uber_India

ಬೆಂಗಳೂರು: ಬೈಕ್ ಟ್ಯಾಕ್ಸಿ ಸೇವೆಗಳನ್ನು ನಿಷೇಧಿಸುವ ನಿರ್ಧಾರವನ್ನು ರಾಜ್ಯ ಸರ್ಕಾರ ಮರುಪರಿಶೀಲಿಸಬೇಕು ಎಂದು ಒತ್ತಾಯಿಸಿ ನಗರದ ಬೈಕ್ ಟ್ಯಾಕ್ಸಿ ಮಹಿಳಾ ಚಾಲಕರು ಸಾರಿಗೆ ಸಚಿವರಿಗೆ ಮನವಿ ಸಲ್ಲಿಸಿದ್ದಾರೆ.

ADVERTISEMENT

ಮೇ ಮಧ್ಯ ಭಾಗದೊಳಗೆ ಎಲ್ಲ ಬೈಕ್ ಟ್ಯಾಕ್ಸಿ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸುವುದಾಗಿ ಸರ್ಕಾರ ಹೇಳಿದೆ. ಅದಕ್ಕೆ ಸಂಬಂಧಿಸಿದಂತೆ ಹೊಸ ನಿಯಮಗಳನ್ನು ರೂಪಿಸಲು ಸರ್ಕಾರವನ್ನು ಒತ್ತಾಯಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ. ಮೇ ತಿಂಗಳ ಗಡುವು ಹತ್ತಿರ ಬರುತ್ತಿರುವುದರಿಂದ ಸರ್ಕಾರವು ಈ ನಿರ್ಧಾರವನ್ನು ಮರುಪರಿಶೀಲಿಸಬೇಕು. ಬೈಕ್‌ ಟ್ಯಾಕ್ಸಿಯ ಆದಾಯವನ್ನೇ ನಂಬಿ ಬದುಕುವವರು ಬೀದಿಗೆ ಬೀಳುವಂತಾಗಬಾರದು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.

ಪರ್ಯಾಯ ಉದ್ಯೋಗಳ ಕೊರತೆ ಇದೆ. ಈ ಆದೇಶವು ಅವಲಂಬಿತರಿಗೆ ಆತಂಕವನ್ನು ಸೃಷ್ಟಿಸಿದೆ. ಹಾಗಾಗಿ ಸ್ಪಷ್ಟ ನಿಯಮಗಳನ್ನು ರೂಪಿಸಬೇಕು. ನಿಯಮ ಪಾಲಿಸುವವರಿಗೆ ಪರವಾನಗಿ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.