ADVERTISEMENT

ಆಟೊ ಪ್ರಯಾಣ ದರ ಹೆಚ್ಚಳ; ಇಂದಿನಿಂದ ಜಾರಿ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2021, 20:15 IST
Last Updated 30 ನವೆಂಬರ್ 2021, 20:15 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ನಗರದಲ್ಲಿ ಆಟೊ ಪ್ರಯಾಣ ದರವನ್ನು ಹಾಲಿ ದರಕ್ಕಿಂತ ₹ 5 ಹೆಚ್ಚಳ ಮಾಡಲಾಗಿದ್ದು, ಈ ಪರಿಷ್ಕೃತ ದರ ಇಂದಿನಿಂದಲೇ (ಡಿ.1) ಜಾರಿಗೆ ಬರಲಿದೆ.

'ಹೊಸ ಆಟೊ ಖರೀದಿ ಬೆಲೆ, ಸಾರಿಗೆ ಇಲಾಖೆ ಶುಲ್ಕಗಳು, ಇಂಧನ ಹಾಗೂ ಎಲ್‌ಪಿಜಿ ಗ್ಯಾಸ್ ದರ ಏರಿಕೆ ಆಗಿದೆ’ ಎಂದು ಆರೋಪಿಸಿ ಆಟೊ ಚಾಲಕರ ಸಂಘಟನೆಗಳು ನೀಡಿದ್ದ ಮನವಿ ಪರಿಶೀಲಿಸಿದ್ದ ಬೆಂಗಳೂರು ನಗರ ಜಿಲ್ಲೆಯ ಪ್ರಾದೇಶಿಕ ಸಾರಿಗೆ ಪ್ರಾಧಿಕಾರ, ದರ ಪರಿಷ್ಕರಣೆ ಮಾಡಿ ಇತ್ತೀಚೆಗಷ್ಟೇ ಅಧಿಸೂಚನೆ ಹೊರಡಿಸಿತ್ತು.

ಸದ್ಯ 1.9 ಕಿ.ಮೀ ಸಂಚಾರಕ್ಕೆ ₹ 25 ದರವಿದೆ. ಇದೀಗ 2 ಕಿ.ಮೀ ಸಂಚಾರಕ್ಕೆ ₹ 30 ನಿಗದಿ ಮಾಡಲಾಗಿದೆ.

ADVERTISEMENT

‘ಲಾಕ್‌ಡೌನ್‌ನಿಂದ ಆಟೊ ಚಾಲಕ ಜೀವನ ನಿರ್ವಹಣೆಗೆ ತೊಂದರೆ ಆಗಿದೆ. ಮಂಗಳೂರು ಹಾಗೂ ಉಡುಪಿ ನಗರಗಳಲ್ಲಿ ಈಗಾಗಲೇ ದರ ಹೆಚ್ಚಳ ಮಾಡಲಾಗಿದೆ. ಈ ಎಲ್ಲ ಅಂಶಗಳನ್ನು ಗಮನಿಸಿ ಪ್ರಯಾಣ ದರವನ್ನು ಹೆಚ್ಚಿಸಲಾಗಿದೆ’ ಎಂದು ಅಧಿಸೂಚನೆಯಲ್ಲಿ ಉಲ್ಲೇಖಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.