ADVERTISEMENT

ಡಾ.ಶಾಂತಲಾ, ಅನುಪಮಾಗೆ ‘ಡಾ.ಎಚ್. ಗಿರಿಜಮ್ಮ ಪ್ರಶಸ್ತಿ’

​ಪ್ರಜಾವಾಣಿ ವಾರ್ತೆ
Published 8 ಜುಲೈ 2022, 19:52 IST
Last Updated 8 ಜುಲೈ 2022, 19:52 IST
ಡಾ.ಅನುಪಮಾ
ಡಾ.ಅನುಪಮಾ   

ಬೆಂಗಳೂರು:ಡಾ.ಎಚ್. ಗಿರಿಜಮ್ಮ ಸ್ನೇಹ ಬಳಗ ನೀಡುವ ‘ಡಾ.ಎಚ್. ಗಿರಿಜಮ್ಮ ಪ್ರಶಸ್ತಿ’ಗೆ ಲೇಖಕಿಯರಾದ ಡಾ. ಶಾಂತಲಾ ಮತ್ತು ಡಾ.ಎಚ್.ಎಸ್. ಅನುಪಮಾ ಅವರ ಕೃತಿಗಳು ಆಯ್ಕೆಯಾಗಿವೆ.

2021ನೇ ಸಾಲಿನ ಈ ಪ್ರಶಸ್ತಿಗೆ ವೈದ್ಯ ಲೇಖಕಿಯರಿಂದ ಕೃತಿಗಳನ್ನು ಆಹ್ವಾನಿಸಲಾಗಿತ್ತು. ಡಾ. ಶಾಂತಲಾ ಅವರ ವೈಜ್ಞಾನಿಕ ಕಾದಂಬರಿ ‘3019 ಎ.ಡಿ.’ ಮತ್ತು ಡಾ.ಎಚ್.ಎಸ್. ಅನುಪಮಾ ಅವರ ‘ಕೋವಿಡ್ ಡಾಕ್ಟರ್ ಡೈರಿ’ ಕೃತಿ ಆಯ್ಕೆಯಾಗಿದೆ. ಪ್ರಶಸ್ತಿಯು ₹ 20 ಸಾವಿರ ನಗದು ಮತ್ತು ಸ್ಮರಣಿಕೆ ಒಳಗೊಂಡಿದೆ.

ಡಾ.ಸಿ.ಆರ್. ಚಂದ್ರಶೇಖರ್, ಆರ್‌.ಕೆ. ಸರೋಜಾ ಹಾಗೂಡಾ.ನಾ. ಸೋಮೇಶ್ವರ ಅವರು ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿದ್ದರು.

ADVERTISEMENT

ಪ್ರಶಸ್ತಿ ಪ್ರದಾನ ಸಮಾರಂಭವು ಇದೇ23 ರಂದು ಸಂಜೆ 5.30ಕ್ಕೆ ಬೆಂಗಳೂರಿನ ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ನಡೆಯಲಿದೆ. ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಚಿತ್ರಕಲಾ ಪರಿಷತ್ತಿನ ಅಧ್ಯಕ್ಷ ಬಿ.ಎಲ್. ಶಂಕರ್, ನಿರೂಪಕಿ ಅಪರ್ಣಾ ವಸ್ತಾರೆ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಡಾ.ಸಿ.ಆರ್. ಚಂದ್ರಶೇಖರ್ ಅವರು ಸಮಾರಂಭದ ಅಧ್ಯಕ್ಷತೆ ವಹಿಸ ಲಿದ್ದಾರೆ. ಆರ್‌.ಕೆ. ಸರೋಜಾ ಅವರು ಅಭಿನಂದನಾ ನುಡಿ ನುಡಿಯುತ್ತಾರೆ ಎಂದು ಬಳಗದ ಸಂಚಾಲಕಿ ಡಾ. ವಸುಂಧರಾ ಭೂಪತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.