ADVERTISEMENT

ಅಯೋಧ್ಯೆ ತೀರ್ಪು: ಜನರ ಅಭಿಪ್ರಾಯಗಳು

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2019, 20:11 IST
Last Updated 9 ನವೆಂಬರ್ 2019, 20:11 IST
   

ರಾಜಕೀಯದಿಂದ ವಿಳಂಬ
‘ಅಯೋಧ್ಯೆ ವಿವಾದವನ್ನು ಇಷ್ಟು ವರ್ಷ ನಡೆಸಿಕೊಂಡು ಬರುವ ಅಗತ್ಯ ಇರಲಿಲ್ಲ. ಕೆಲ ರಾಜಕೀಯ ಮುಖಂಡರು ಈ ವಿವಾದ ಜೀವಂತವಾಗಿರುವಂತೆ ನೋಡಿಕೊಂಡರು. ಆದರೆ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಮೇಲೆ ವಿವಿಧ ಸಂಘಟನೆಗಳು ಒತ್ತಡ ಹಾಕಿದ ಪರಿಣಾಮ ಅಂತಿಮವಾಗಿ ವಿವಾದಕ್ಕೆ ತೆರೆ ಬಿದ್ದಿದೆ. ಈ ತೀರ್ಪು ಸಮಾಧಾನ ತಂದಿದೆ’.
-ಹುಸೇನ್, ಮರಿಯಪ್ಪನಪಾಳ್ಯ

ಇಬ್ಬರಿಗೂ ನ್ಯಾಯ ಸಿಕ್ಕಿದೆ
‘ಮಂದಿರ ಹಾಗೂ ಮಸೀದಿ ನಿರ್ಮಾಣಕ್ಕೆ ಅವಕಾಶ ನೀಡುವ ಮೂಲಕ ಎರಡೂ ಸಮುದಾಯಕ್ಕೆ ನ್ಯಾಯ ಒದಗಿಸಿಕೊಡಲಾಗಿದೆ. ಶಾಂತಿ, ಸೌಹಾರ್ದ ಕಾಪಾಡಲು ಕೂಡಾ ಈ ತೀರ್ಪು ಸಹಾಯಕವಾಗಿದೆ. ವಿವಾದಿತ ಜಾಗದಲ್ಲಿ ರಾಮಮಂದಿರ ನಿರ್ಮಿಸಬೇಕೆನ್ನುವುದು ಹಿಂದೂಗಳ ಬಹುವರ್ಷದ ಬೇಡಿಕೆಯಾಗಿತ್ತು’.
-ನವೀನ್,ಕ್ವೀನ್ಸ್ ರಸ್ತೆ

ಧಾರ್ಮಿಕ ಭಾವನೆಗಳಿಗೆ ಮನ್ನಣೆ
‘ಇಬ್ಬರಿಗೂ ಸ್ಥಳವನ್ನು ಸಮಾನವಾಗಿ ಹಂಚಿಕೆ ಮಾಡಿದರೆ ಪುನಃ ವಿವಾದ ಉಂಟಾಗುತ್ತಿತ್ತು. ಆದ್ದರಿಂದ ವಿವಾದಿತ ಸ್ಥಳವನ್ನು ರಾಮಮಂದಿರ ನಿರ್ಮಾಣಕ್ಕೆ ನೀಡಿ, ಮಸೀದಿ ನಿರ್ಮಾಣಕ್ಕೆ ಬೇರೆಡೆ ಜಾಗ ಕೊಟ್ಟಿರುವುದು ಸ್ವಾಗತಾರ್ಹ. ಧಾರ್ಮಿಕ ಭಾವನೆಗಳನ್ನು ಪರಿಗಣಿಸಿ, ತೀರ್ಪು ನೀಡಲಾಗಿದೆ ಅನಿಸುತ್ತದೆ’.
-ಇಕ್ಬಾಲ್, ಶಿವಾಜಿನಗರ

ADVERTISEMENT

ಹಿಂದೂಗಳ ನಂಬಿಕೆ ಸಾಕಾರ
‘ಅಯೋಧ್ಯೆಯಲ್ಲಿ ರಾಮ ಜನಿಸಿದ್ದಾನೆ ಎಂದು ನಂಬಲಾಗಿದೆ. ಹಾಗಾಗಿ, ವಿವಾದಿತ ಭೂಮಿಯಲ್ಲಿ ರಾಮಮಂದಿರ ನಿರ್ಮಿಸಬೇಕೆಂಬ ಕೂಗು ಬಹಳ ವರ್ಷಗಳಿಂದಿವೆ. ಇದೀಗಸುಪ್ರೀಂಕೋರ್ಟ್‌ ಆ ಸ್ಥಳದಲ್ಲಿ ರಾಮಮಂದಿರ ನಿರ್ಮಾಣಕ್ಕೆ ಅವಕಾಶ ನೀಡುವ ಮೂಲಕ ಹಿಂದೂಗಳ ನಂಬಿಕೆಯನ್ನು ಸಾಕಾರಗೊಳಿಸಿದೆ’.
-ಶೈಲೇಂದರ್, ಎಂ.ಜಿ. ರಸ್ತೆ

ಸಾಮಾಜಿಕ ಕಾರ್ಯಕ್ಕೆ ನೀಡಬೇಕಿತ್ತು
‘ವಿವಾದಿತ ಭೂಮಿಯನ್ನು ಶಿಕ್ಷಣ ಸಂಸ್ಥೆ ಅಥವಾ ಆರೋಗ್ಯ ಕೇಂದ್ರಗಳ ನಿರ್ಮಾಣಕ್ಕೆ ಒದಗಿಸಿದಲ್ಲಿ ಎಲ್ಲರೂ ಸದುಪಯೋಗ ಪಡೆದುಕೊಳ್ಳಬಹುದಾಗಿತ್ತು. ಆದರೆ, ಆ ಜಾಗದಲ್ಲಿ ಮಂದಿರ ಅಥವಾ ಮಸೀದಿ ನಿರ್ಮಿಸಬೇಕೆಂದು ಹಿಂದೂ ಮತ್ತು ಮುಸ್ಲಿಂ ಸಮುದಾಯಗಳು ಹಗ್ಗಜಗ್ಗಾಟ ನಡೆಸುತ್ತಿದ್ದವು. ಆದ್ದರಿಂದ ಈ ತೀರ್ಪು ಇಬ್ಬರಿಗೂ ನ್ಯಾಯವನ್ನು ಒದಗಿಸಿದೆ’.
-ವಿಶ್ವನಾಥ ರೆಡ್ಡಿ, ಕೋಲಾರ

ನ್ಯಾಯದ ತಕ್ಕಡಿ ಸಮಾನವಾಗಿ ತೂಗಿದೆ
‘ಪುರಾಣದಲ್ಲಿ ಬರುವ ಘಟನೆಯೊಂದರಲ್ಲಿ ಶ್ರೀಕೃಷ್ಣನ ತುಲಾಭಾರ ನಡೆಯುತ್ತದೆ. ತಕ್ಕಡಿಯ ಒಂದುಕಡೆ ಶ್ರೀಕೃಷ್ಣ, ಇನ್ನೊಂದೆಡೆ ಬಂಗಾರದ ನಾಣ್ಯಗಳನ್ನು ಹಾಕಲಾಗುತ್ತದೆ. ತೂಕ ಸಮಾನವಾಗಲು ತುಳಸಿ ಕುಡಿಯೊಂದು ನಾಣ್ಯದ ಕಡೆ ಬೀಳಬೇಕಾಗುತ್ತದೆ. ಅದೇ ರೀತಿ, ತುಳಸಿ ವಿವಾಹದ ದಿನದಂದು ಬಂದ ತೀರ್ಪುನ್ಯಾಯದ ತಕ್ಕಡಿ ಸಮಾನವಾಗಿ ತೂಗುವಂತೆ ಮಾಡಿದೆ’.
-ಕೆ.ಎಂ.ಮುನಿಯಪ್ಪ, ಕನಕನ ಪಾಳ್ಯ

ಇತಿಹಾಸಕ್ಕೆ ಅಡಿಪಾಯ
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡಲು ಸುಪ್ರೀಂ ಕೋರ್ಟ್‌ ನೀಡಿ‌ರುವ ಮಹತ್ವದ ತೀರ್ಪು ಸ್ವಾಗತಾರ್ಹ. ಅಯೋಧ್ಯೆಯ ಇತಿಹಾಸಕ್ಕೆ ರಾಮಮಂದಿರ ನಿರ್ಮಾಣ ತಳಹದಿಯಾಗಲಿದೆ. ಮಂದಿರ ನಿರ್ಮಾಣದಿಂದ ವಿಶ್ವಕ್ಕೆ ದೇಶದ ಸಂಸ್ಕೃತಿ ಮತ್ತೊಮ್ಮೆ ಪರಿಚಯವಾಗಲಿದೆ.
-ಎನ್.ಕಲಾವತಿ, ಕೆ.ಆರ್‌.ಪುರ

ಗಲಭೆಗಳಿಗೆ ಕೊನೆ
ಅಯೋಧ್ಯೆ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ ಹೊರಡಿಸಿದ ತೀರ್ಪು ವೈಯಕ್ತಿಕವಾಗಿ ಒಪ್ಪಲಾಗದಿದ್ದರೂ, ನ್ಯಾಯಕ್ಕೆ ತಲೆ ಬಾಗುತ್ತೇನೆ. ಎರಡೂ ಧರ್ಮಕ್ಕೂ ಹೊಂದುವಂತೆ ತೀರ್ಪು ಹೊರಬಿದ್ದಿದೆ. ಧರ್ಮಕ್ಕಿಂತ ಭಾರತೀಯರು ಎಂಬ ಭಾವನೆ ಎಲ್ಲರಲ್ಲೂ ಮೂಡಲಿ.
-ಶಾಯಿಸ್ತಾ, ಯಲಹಂಕ

ಅಯೋಧ್ಯೆಯ ಕಳಂಕ ಕಳಚಿತು
ಅಯೋಧ್ಯೆ ಗಲಭೆಯಲ್ಲಿ ದೇಶದ ಅದೆಷ್ಟೋ ಮಂದಿ ಮಡಿದಿದ್ದಾರೆ. ತೀರ್ಪಿನಿಂದ ದೇಶದಲ್ಲಿ ಅಯೋಧ್ಯೆಗೆ ಇದ್ದ ಕಳಂಕ ಕಳಚಿದೆ. ನ್ಯಾಯಾಲಯದ ತೀರ್ಪು ಒಂದು ಧರ್ಮದ ಪರವಾಗಿಲ್ಲ. ಧರ್ಮಕ್ಕಾಗಿ ಪ್ರಾಣ ತ್ಯಾಗ ಮಾಡಿದವರಿಗೆ ಇಂದು ಶಾಂತಿ ಸಿಕ್ಕಂತಾಗಿದೆ.
-ನಾಗವೇಣಿ, ಬೆಂಗಳೂರು

ರಾಮಾಯಣ’ಕ್ಕೆ ಸಾಕ್ಷಿ
ರಾಮಾಯಣದ ಬಗ್ಗೆ ಕೇಳುವಾಗೆಲ್ಲಾ ಅಯೋಧ್ಯೆ ಹೆಸರು ಮರುಕಳಿಸುತ್ತಿತ್ತು. ರಾಮಾಯಣದ ಹಲವು ಕುರುಹುಗಳು ದೇಶದ ನಾನಾಕಡೆ ಇದೆ. ಆದರೆ, ರಾಮಾಯಣದ ಮೂಲವಾದ ಅಯೋಧ್ಯೆಯಲ್ಲೇ ರಾಮನ ಅಸ್ತಿತ್ವ ಅತಂತ್ರವಾಗಿತ್ತು. ಮಂದಿರ ನಿರ್ಮಾಣದಿಂದ ರಾಮಾಯಣಕ್ಕೆ ಸಾಕ್ಷಿ ಸಿಕ್ಕಂತಾಗುತ್ತದೆ.
-ವನಿತಾ, ಬೆಂಗಳೂರು

ಇತಿಹಾಸಕ್ಕೆ ಅಡಿಪಾಯ
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡಲು ಸುಪ್ರೀಂ ಕೋರ್ಟ್‌ ನೀಡಿ‌ರುವ ಮಹತ್ವದ ತೀರ್ಪು ಸ್ವಾಗತಾರ್ಹ. ಅಯೋಧ್ಯೆಯ ಇತಿಹಾಸಕ್ಕೆ ರಾಮಮಂದಿರ ನಿರ್ಮಾಣ ತಳಹದಿಯಾಗಲಿದೆ. ಮಂದಿರ ನಿರ್ಮಾಣದಿಂದ ವಿಶ್ವಕ್ಕೆ ದೇಶದ ಸಂಸ್ಕೃತಿ ಮತ್ತೊಮ್ಮೆ ಪರಿಚಯವಾಗಲಿದೆ.
-ಎನ್.ಕಲಾವತಿ, ಕೆ.ಆರ್‌.ಪುರ

ಗಲಭೆಗಳಿಗೆ ಕೊನೆ
ಅಯೋಧ್ಯೆ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ ಹೊರಡಿಸಿದ ತೀರ್ಪು ವೈಯಕ್ತಿಕವಾಗಿ ಒಪ್ಪಲಾಗದಿದ್ದರೂ, ನ್ಯಾಯಕ್ಕೆ ತಲೆ ಬಾಗುತ್ತೇನೆ. ಎರಡೂ ಧರ್ಮಕ್ಕೂ ಹೊಂದುವಂತೆ ತೀರ್ಪು ಹೊರಬಿದ್ದಿದೆ.ಧರ್ಮದ ಉಳಿವಿಗಾಗಿ ಪರಸ್ಪರ ಗಲಭೆಗಳು ಮುಂದಿನ ದಿನಗಳಲ್ಲಿ ಇರುವುದಿಲ್ಲ ಎಂದು ಭಾವಿಸಿದ್ದೇನೆ. ಧರ್ಮಕ್ಕಿಂತ ಭಾರತೀಯರು ಎಂಬ ಭಾವನೆ ಎಲ್ಲರಲ್ಲೂ ಮೂಡಲಿ.
– ಶಾಯಿಸ್ತಾ, ಯಲಹಂಕ

ರಾಮಮಂದಿರ ನಮ್ಮ ಹೆಮ್ಮೆ
ರಾಮಮಂದಿರ ಪುರಾಣದ ಪ್ರತೀಕ. ಎರಡೂ ಧರ್ಮಕ್ಕೆ ಸಮಾನ ಆದ್ಯತೆ ಸಿಕ್ಕಿ ತೀರ್ಪು ಏಕತೆ ಸಾರಿದೆ. ಅದನ್ನು ಎಲ್ಲರೂ ಸಮಾನವಾಗಿ ಸ್ವೀಕರಿಸಬೇಕು. ಶ್ರೀರಾಮನನ್ನು ನ್ಯಾಯಾಂಗ ಬಂಧನದಿಂದ ಬಿಡಿಸಲಾಗಿದೆ.
-ವಿ.ಆದಿನಾರಾಯಣ, ಹೆಣ್ಣೂರು

‘ಅಯೋಧ್ಯೆಯ ಕಳಂಕ ಕಳಚಿತು’
ಅಯೋಧ್ಯೆ ಗಲಭೆಯಲ್ಲಿ ದೇಶದ ಅದೆಷ್ಟೋ ಮಂದಿ ಮಡಿದಿದ್ದಾರೆ. ತೀರ್ಪಿನಿಂದ ದೇಶದಲ್ಲಿ ಅಯೋಧ್ಯೆಗೆ ಇದ್ದ ಕಳಂಕ ಕಳಚಿದೆ. ನ್ಯಾಯಾಲಯದ ತೀರ್ಪು ಒಂದು ಧರ್ಮದ ಪರವಾಗಿಲ್ಲ. ಧರ್ಮಕ್ಕಾಗಿ ಪ್ರಾಣ ತ್ಯಾಗ ಮಾಡಿದವರಿಗೆ ಇಂದು ಶಾಂತಿ ಸಿಕ್ಕಂತಾಗಿದೆ.
-ನಾಗವೇಣಿ, ಬೆಂಗಳೂರು

‘ರಾಮಾಯಣ’ಕ್ಕೆ ಸಾಕ್ಷಿ
ರಾಮಾಯಣದ ಬಗ್ಗೆ ಕೇಳುವಾಗೆಲ್ಲಾ ಅಯೋಧ್ಯೆ ಹೆಸರು ಮರುಕಳಿಸುತ್ತಿತ್ತು. ರಾಮಾಯಣದ ಹಲವು ಕುರುಹುಗಳು ದೇಶದ ನಾನಾಕಡೆ ಇದೆ. ಆದರೆ, ರಾಮಾಯಣದ ಮೂಲವಾದ ಅಯೋಧ್ಯೆಯಲ್ಲೇ ರಾಮನ ಅಸ್ತಿತ್ವ ಅತಂತ್ರವಾಗಿತ್ತು. ಮಂದಿರ ನಿರ್ಮಾಣದಿಂದ ರಾಮಾಯಣಕ್ಕೆ ಸಾಕ್ಷಿ ಸಿಕ್ಕಂತಾಗುತ್ತದೆ.
–ವನಿತಾ, ಬೆಂಗಳೂರು

ಸೌಹಾರ್ದದಿಂದ ಬಾಳೋಣ
ಧಾರ್ಮಿಕ ಹೆಗ್ಗಳಿಕೆಗಾಗಿ ಪರಸ್ಪರ ದ್ವೇಷ ಕಾರುತ್ತಿದ್ದ ಹಿಂದೂ ಮುಸ್ಲಿಮರಲ್ಲಿ ಇನ್ನಾದರೂ ಸೌಹಾರ್ದ ಮೂಡಲಿ. ಆಚರಣೆಗಳು ಬೇರೆಯಾದರೂ ನಾವೆಲ್ಲಾ ಒಂದೇ ಎಂಬ ಭಾವನೆಯಲ್ಲಿ ಜಯ ಸಾಧಿಸೋಣ. ದೇಶದಲ್ಲಿ ಅಯೋಧ್ಯೆ ವಿಚಾರವಾಗಿ ಮತ್ತೆ ರಾಜಕೀಯ ಕುತಂತ್ರಗಳು ನಡೆಯದಿರಲಿ.
-ಮುಸ್ತಾಫಾ, ವೈಟ್‌ಫೀಲ್ಡ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.