ADVERTISEMENT

20ರಿಂದ ‘ಬೆಂಗಳೂರು ಕಾವ್ಯ ಉತ್ಸವ’

​ಪ್ರಜಾವಾಣಿ ವಾರ್ತೆ
Published 12 ಜುಲೈ 2019, 20:13 IST
Last Updated 12 ಜುಲೈ 2019, 20:13 IST

ಬೆಂಗಳೂರು:ಆಟ–ಗಲಾಟ ಸಂಸ್ಥೆಯ ಆಶ್ರಯದಲ್ಲಿ ‘ಬೆಂಗಳೂರು ಕಾವ್ಯ ಉತ್ಸವ’ದ ನಾಲ್ಕನೇ ಆವೃತ್ತಿ ಜುಲೈ 20 ಮತ್ತು 21ರಂದುಹೋಟೆಲ್ ತಾಜ್ ವೆಸ್ಟೆಂಡ್‍ನಲ್ಲಿ ನಡೆಯಲಿದೆ.

ಈ ಬಾರಿಯೂಗದ್ಯ ಮತ್ತು ಹಾಡಿನ ವಿಶೇಷ ಕಾರ್ಯಕ್ರಮಗಳು ನಡೆಯಲಿವೆ. ದೇಶ–ವಿದೇಶಗಳಿಂದ ಹಳೆಯ ಮತ್ತು ಹೊಸ ತಲೆಮಾರಿನಬಹುಭಾಷಾ ಕವಿಗಳು, ಗೀತ ರಚನೆಕಾರರು, ಹಾಡುಗಾರರು, ಸಂಗೀತಗಾರರು ಭಾಗವಹಿಸಲಿದ್ದಾರೆ.‌ ಎರಡು ದಿನಗಳ ಈ ಉತ್ಸವ ಬೆಳಿಗ್ಗೆ 10ರಿಂದ ರಾತ್ರಿ 8ರವರೆಗೆ ನಡೆಯಲಿದೆ.

ದೇಶದ ವಿವಿಧೆಡೆಯಿಂದ ಬರುವ 100ಕ್ಕೂ ಹೆಚ್ಚು ಕವಿಗಳು ಕವಿತೆಗಳನ್ನು ವಾಚನ ಮಾಡಲಿದ್ದಾರೆ.ಉತ್ಸವವು ಕವಿತೆ, ಸಂವಾದ, ಭಾಷಣಗಳು, ಕಾರ್ಯಾಗಾರಗಳನ್ನು ಒಳಗೊಂಡಿವೆ. ಕನ್ನಡದ ಕಾವ್ಯ ಗೋಷ್ಠಿಗಳೂ ನಡೆಯಲಿವೆ ಎಂದು ಶ್ರೀದೇವಿ ರಾವ್ ಹೇಳಿದ್ದಾರೆ.

ADVERTISEMENT

‘ಕಳೆದ ವರ್ಷ ನಗರದಲ್ಲಿ ನಡೆದ ಈ ಉತ್ಸವದಲ್ಲಿಸುಮಾರು 5000ಕ್ಕೂ ಹೆಚ್ಚು ಕಾವ್ಯಾಸಕ್ತರು ಭಾಗವಹಿದ್ದರು. ಈ ವರ್ಷ ಇನ್ನೂ ಹೆಚ್ಚಿನ ಸಂಖ್ಯೆಯ ಜನರನ್ನು ಆಕರ್ಷಿಸಲು ಕಾತರರಾಗಿದ್ದೇವೆ’ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.