ADVERTISEMENT

ಯೋಜನಾ ಮಂಡಳಿ ಆದಾಯ ಇಳಿಕೆ: ಬೇಸರ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2018, 19:30 IST
Last Updated 27 ಡಿಸೆಂಬರ್ 2018, 19:30 IST

ಬೆಂಗಳೂರು:ರಾಜ್ಯ ನಗರ ಯೋಜನಾ ಮಂಡಳಿಯ ಆದಾಯ ಪ್ರತಿ ವರ್ಷ ಇಳಿಕೆಯಾಗುತ್ತಿರುವುದಕ್ಕೆ ಉಪಮುಖ್ಯಮಂತ್ರಿ ಜಿ.ಪರಮೇಶ್ವರ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಎರಡು ವರ್ಷಗಳ ಬಳಿಕ ನಗರದಲ್ಲಿ ನಡೆದ ಮಂಡಳಿಯ 68ನೇ ಸಭೆಯಲ್ಲಿ ಅವರು ಭಾಗವಹಿಸಿ, ಅಧಿಕಾರಿಗಳಿಂದ ಮಾಹಿತಿ ಪಡೆದರು.

‘ಆದಾಯ ಪ್ರತಿವರ್ಷ ಏರಿಕೆ ಆಗಬೇಕು. ಆದರೆ, 2016-17ರಲ್ಲಿ ₹ 21 ಕೋಟಿ,2017-18 ರಲ್ಲಿ ₹ 19 ಕೋಟಿ ಹಾಗೂ2018-19ನೇ ಸಾಲಿನಲ್ಲಿ ₹ 14 ಕೋಟಿ ಮಾತ್ರ ಆದಾಯ ಬಂದಿದೆ. ಪ್ರತಿವರ್ಷವೂ ವರಮಾನ ಇಳಿಕೆಯಾಗುತ್ತಿದೆ. ಕನಿಷ್ಠ ಶೇ 10ರಷ್ಟು ಹೆಚ್ಚಳವಾಗುವಂತೆ ನೋಡಿಕೊಳ್ಳಿ’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ADVERTISEMENT

‘ನಗರ ಯೋಜನೆಗೆ ಸಂಬಂಧಿಸಿದಂತೆ ತರಬೇತಿಗಾಗಿ ಹಲವಾರು ಅಧಿಕಾರಿಗಳು ವಿದೇಶಕ್ಕೆ ಹೋಗಿ ಬಂದಿದ್ದಾರೆ. ಅವರ ತರಬೇತಿಯ ಉಪಯೋಗ ಆಗಿದೆಯೇ? ತರಬೇತಿ ಹೆಸರಲ್ಲಿ ಹಣ ವ್ಯರ್ಥ ಮಾಡಬೇಡಿ. ವಿದೇಶದಲ್ಲಿ ಕಲಿತು ಬಂದುದನ್ನು ಇಲ್ಲಿ ಚಾಲ್ತಿಗೆ ತನ್ನಿ’ ಎಂದು ಖಾರವಾಗಿಯೇ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.