ADVERTISEMENT

ಪರ್ಲ್ಆರ್ಕ್ ಸಿಸ್ಟಮ್ಸ್ ಜತೆಗೆ ಬೆಂಗಳೂರು ವಿ.ವಿ. ಒಪ್ಪಂದ

​ಪ್ರಜಾವಾಣಿ ವಾರ್ತೆ
Published 18 ಜೂನ್ 2019, 19:49 IST
Last Updated 18 ಜೂನ್ 2019, 19:49 IST
ಬೆಂಗಳೂರು ವಿಶ್ವವಿದ್ಯಾಲಯ ಮತ್ತು ಪರ್ಲ್ಆರ್ಕ್ ಸಿಸ್ಟಮ್ಸ್‌ ನಡುವೆ ಒಪ್ಪಂದಕ್ಕೆ ಸಹಿ ಹಾಕಲಾಯಿತು.
ಬೆಂಗಳೂರು ವಿಶ್ವವಿದ್ಯಾಲಯ ಮತ್ತು ಪರ್ಲ್ಆರ್ಕ್ ಸಿಸ್ಟಮ್ಸ್‌ ನಡುವೆ ಒಪ್ಪಂದಕ್ಕೆ ಸಹಿ ಹಾಕಲಾಯಿತು.   

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯ ಮತ್ತು ಪರ್ಲ್ಆರ್ಕ್ ಸಿಸ್ಟಮ್ಸ್ ನಿಗಮ ನಿಯಮಿತ ತಂತ್ರಜ್ಞಾನ ವಿಷಯದಲ್ಲಿ ಸಹಕಾರಕ್ಕಾಗಿ ಒಪ್ಪಂದ ಮಾಡಿಕೊಂಡಿದೆ.

ವಿಶ್ವವಿದ್ಯಾಲಯದ ಪರವಾಗಿ ಕುಲಸಚಿವ ಪ್ರೊ.ಬಿ.ಕೆ.ರವಿ ಮತ್ತು ಪರ್ಲ್ಆರ್ಕ್ ಪರವಾಗಿ ಮುಖ್ಯಕಾರ್ಯ ನಿರ್ವಾಹಕ ಅಧಿಕಾರಿ ರವೀಶ ಟಿ.ಸಿ ಅವರಿ ಒಪ್ಪಂದ ಪತ್ರಕ್ಕೆ ಸಹಿ ಹಾಕಿದರು.

ಕುಲಪತಿ ಪ್ರೊ.ಕೆ.ಆರ್.ವೇಣುಗೋಪಾಲ್‌,ವಿಜ್ಞಾನ ನಿಕಾಯದ ಡೀನ್‌ ಪ್ರೊ.ಎಂ.ರಾಮಚಂದ್ರ ಮೋಹನ್, ಎಂಸಿಎ ವಿಭಾಗದ ಮುಖ್ಯಸ್ಥ ಪ್ರೊ.ಬಿ.ಎಲ್. ಮುರಳೀಧರ, ಪರ್ಲ್ಆರ್ಕ್ ಸಿಸ್ಟಮ್ಸ್ ನ ಸಿ.ಎಸ್‌.ಪ್ರಕಾಶ್‌ ಇದ್ದರು.

ADVERTISEMENT

ಕಂಪನಿಯು ಬೆಂಗಳೂರು ವಿ.ವಿ.ಗೆ ಮುಂದಿನ ಪೀಳಿಗೆಯ ತಂತ್ರಜ್ಞಾನದ ವಿಷಯದಲ್ಲಿ ಮಾಹಿತಿ ಒದಗಿಸಲಿದೆ. ಪರಿಣತಿ ಹೊಂದಿರುವ ಕ್ಷೇತ್ರಗಳಲ್ಲಿ ಕಂಪನಿ ಮತ್ತು ವಿಶ್ವವಿದ್ಯಾಲಯ ಸಂಶೋಧನೆ ಕೈಗೊಳ್ಳಲಿದೆ. ಕಂಪನಿಯು ವಿದ್ಯಾರ್ಥಿಗಳಿಗೆ ಉದ್ಯಮ ಕ್ಷೇತ್ರದಲ್ಲಿ ಚಾಲ್ತಿಯಲ್ಲಿರುವ ತಂತ್ರಜ್ಞಾನದ ವಿಷಯದಲ್ಲಿ, ತರಬೇತಿ ನೀಡಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.