ADVERTISEMENT

ವಿದೇಶಿ ಭಾಷೆ ಅಧ್ಯಯನ: ಅರ್ಜಿ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2019, 18:58 IST
Last Updated 2 ಆಗಸ್ಟ್ 2019, 18:58 IST

ಬೆಂಗಳೂರು: ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದ ಜಾಗತಿಕ ಭಾಷಾ ಅಧ್ಯಯನ ವಿಭಾಗದಲ್ಲಿ ವಿವಿಧ ಭಾಷೆಗಳ ಅಧ್ಯಯನಕ್ಕೆ ಕರೆಯಲಾದ ಅರ್ಜಿ ಸ್ವೀಕಾರದ ದಿನಾಂಕವನ್ನು ಆಗಸ್ಟ್‌ 11ರವರೆಗೆ ವಿಸ್ತರಿಸಲಾಗಿದೆ.

ಫ್ರೆಂಚ್‌, ಜರ್ಮನ್‌, ಸ್ಪ್ಯಾನಿಷ್‌, ಜಪನೀಸ್‌, ಚೀನೀಸ್‌ ಭಾಷೆಗಳಲ್ಲಿ ಸರ್ಟಿಫಿಕೇಟ್‌–1, ಹೈಯರ್ ಡಿಪ್ಲೊಮಾ, ಅಡ್ವಾನ್ಸ್‌ಡ್‌ ಡಿಪ್ಲೊಮಾ ಕೋರ್ಸ್‌ಗಳಿಗೆ ಅರ್ಜಿ ಸಲ್ಲಿಸಬಹುದು ಎಂದು ಕುಲಸಚಿವರ ಪ್ರಕಟಣೆ ತಿಳಿಸಿದೆ.

ಸಂಸ್ಕೃತ: ಅತಿಥಿ ಉಪನ್ಯಾಸಕರ ಆಹ್ವಾನ
ಬೆಂಗಳೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ಸಂಸ್ಕೃತವಿಭಾಗವು ಅತಿಥಿ ಉಪನ್ಯಾಸಕರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.

ADVERTISEMENT

ಆಗಸ್ಟ್‌ 7ರೊಳಗೆ ಅರ್ಜಿಯನ್ನು ಸಂಯೋಜಕರು, ಸ್ನಾತಕೋತ್ತರ ಸಂಸ್ಕೃತವಿಭಾಗ, ಬೆಂಗಳೂರು ವಿಶ್ವವಿದ್ಯಾಲಯ, ಜ್ಞಾನಭಾರತಿ,ಬೆಂಗಳೂರು-56 ಇಲ್ಲಿಗೆ ಕಳುಹಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.