ADVERTISEMENT

ಬೆಂಗಳೂರು ವಿಶ್ವವಿದ್ಯಾಲಯ: ಆನ್‌ಲೈನ್‌ ತರಗತಿ, ಶುಲ್ಕ ಪಾವತಿ ದಿನಾಂಕ ವಿಸ್ತರಣೆ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2020, 6:38 IST
Last Updated 3 ಏಪ್ರಿಲ್ 2020, 6:38 IST
   

ಬೆಂಗಳೂರು:ಬೆಂಗಳೂರು ವಿಶ್ವವಿದ್ಯಾಲಯವು ಯಶಸ್ವಿಯಾಗಿ ಆನ್ಲೈನ್ ತರಗತಿ ನಡೆಸುತ್ತಿದ್ದು, ಪರೀಕ್ಷ ಶುಲ್ಕ ಪಾವತಿ ದಿನಾಂಕವನ್ನು ಮುಂದೂಡಿದೆ.

ಯುಜಿಸಿಯ ಮಾರ್ಗಸೂಚಿ ಪ್ರಕಾರವಾಗಿ ಬೆಂಗಳೂರು ವಿಶ್ವವಿದ್ಯಾಲಯವು ತನ್ನ ಎಲ್ಲಾ ವಿಭಾಗಗಳಲ್ಲೂ ಆನ್ಲೈನ್ ತರಗತಿಯನ್ನು ಯಶಸ್ವಿಯಾಗಿ ನಡೆಸುತ್ತಿದೆ. ಈ ಸಂಬಂಧ ವಿಭಾಗದ ಮುಖ್ಯಸ್ಥರುಗಳು ತಮ್ಮ ಸಿಬ್ಬಂದಿ ವರ್ಗದೊಂದಿಗೆ ಆನ್ಲೈನ್ ಸಭೆಯನ್ನು ನಡೆಸಿ ತರಗತಿಗಳನ್ನು ನಡೆಸುವಂತೆ ಸೂಚಿಸಿದ್ದಾರೆ. ಇದರಂತೆ ಜೂಮ್ ಎಂಬುವ ತಂತ್ರಾಂಶವನ್ನು ಬಳಸಿಕೊಂಡು ಎಂದಿನಂತೆ ಆನ್ಲೈನ್ ಮೂಲಕವೇ ತರಗತಿ ನಡೆಸಲಾಗುತ್ತಿದೆ. ವಿದ್ಯಾರ್ಥಿಗಳೂ ಸಹ ಇದಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ನೀಡಿದ್ದು ಶೇಕಡ 90%ವಿದ್ಯಾರ್ಥಿಗಳು ಈಗಾಗಲೇ ಆನ್ಲೈನ್ ತರಗತಿಗೆ ನೋಂದಾಯಿಸಿಕೊಂಡಿದ್ದಾರೆ ಎಂದು ಕುಲಪತಿ ಪ್ರೊ.ಕೆ.ಆರ್.ವೇಣುಗೋಪಾಲ್ ತಿಳಿಸಿದ್ದಾರೆ.

ಶಿಕ್ಷಕರುಗಳು ಆನ್ಲೈನ್ ಸಾಧನೆಗಳಾದ ಸ್ಕೈಪ್, ಗೂಗಲ್, ಸಿಸ್ಕೊ, ಜೂಮ್, ವೆಬೆಕ್ಸ್ ಮುಂತಾದವುಗಳನ್ನು ಬಳಸಿಕೊಂಡು ಸೆಮಿನಾರ್, ಆನ್ಲೈನ್ ಟೆಸ್ಟ್, ಪ್ರಾಜೆಕ್ಟ್ ಹಾಗೂ ಅಸೈನ್ಮೆಂಟ್ ನೀಡುತ್ತಿದ್ದಾರೆ.

ADVERTISEMENT

ಕೊರೊನದ ಕುರಿ ನೆರಳಿನ ಹಿನ್ನೆಲೆಯಲ್ಲಿ ದೇಶಕ್ಕೆ ದೇಶವೇ ಲಾಕ್ ಡೌನಾದನಂತರ, ಹೋಂ ಕ್ವಾರಂಟೈನಾಗಿದ್ದ ವಿದ್ಯಾರ್ಥಿಗಳು ಮಾನಸಿಕವಾಗಿ ಏಕತಾನತೆ ಮತ್ತು ಖಿನ್ನತೆಗೆ ತುತ್ತಾಗಿದ್ದರು. ಆದರೆ, ತಂತ್ರಜ್ಞಾನದ ಸಹಾಯದಿಂದಾಗಿ ವಿದ್ಯಾರ್ಥಿಗಳು ಆನ್ಲೈನ್ ತರಗತಿಯಲ್ಲಿ ಭಾಗವಹಿಸುವ ಮೂಲಕ ಹೊಸ ಚೈತನ್ಯ ಪಡೆದುಕೊಂಡಿದ್ದಾರೆ ಹಾಗೂ ಜೂಮ್ ತಂತ್ರಾಂಶದ ಬಳಕೆ ಸರಳವಾಗಿರುವ ಕಾರಣ ವಿದ್ಯಾರ್ಥಿ ಸ್ನೇಹಿಯಾಗಿದೆ. ಅಷ್ಟೇ ಅಲ್ಲದೆ ಇದರಿಂದ ವಿದ್ಯಾರ್ಥಿ ಮತ್ತು ಶಿಕ್ಷಕರ ನಡುವೆ ಏರ್ಪಟ್ಟಿದ ಅಂತರ ಕುಗ್ಗಿದೆ ಹಾಗೂ ಸಾಮಾಜಿಕ ಅಂತರವನ್ನು ಕಾಯ್ದುಕೊಂಡತಾಗಿದೆ.

ಗ್ರಾಮೀಣ ಪ್ರದೇಶದಲ್ಲಿನ ಕೆಲವು ವಿದ್ಯಾರ್ಥಿಗಳು ಅಂತರ್ಜಾಲದ ಕುಂಠಿತ ವೇಗ ಮತ್ತು ಕನೆಕ್ಟಿವಿಟಿ ಸಮಸ್ಯೆ ಎದುರಿಸುತ್ತಿದ್ದರು, ಆನ್ಲೈನ್ ತರಗತಿಗೆ ಸಂತಸ ವ್ಯಕ್ತಪಡಿಸಿದ್ದಾರೆ. ಮುಂದಿನ ಎರಡು ವಾರಗಳಲ್ಲಿ ಶಿಕ್ಷಕರು ಮೊದಲಿನ ವೇಳಾಪಟ್ಟಿಯ ಪ್ರಕಾರ ಪಠ್ಯಕ್ರಮವನ್ನು ಪೂರ್ಣಗೊಳಿಸುವ ಭರವಸೆ ಇದೆ.

ಬೆಂಗಳೂರು ವಿಶ್ವವಿದ್ಯಾಲಯವು ಪರಿಕ್ಷಾ ಶುಲ್ಕ ಪಾವತಿಯ ಅಂತಿಮ ದಿನಾಂಕವನ್ನು ಮುಂದೂಡಿದ್ದು, ವಿಶ್ವವಿದ್ಯಾಲಯ ಪುನರಾರಂಭಗೊಂಡ ಬಳಿಕ ದಿನಾಂಕವನ್ನು ಪ್ರಕಟಿಸುವುದು. ಅಲ್ಲಿಯ ತನಕ ವಿದ್ಯಾರ್ಥಿಗಳು ಮನೆಯಲ್ಲೇ ಇದ್ದುಕೊಂಡು ತಮ್ಮ ವ್ಯಾಸಂಗದ ಮೇಲೆ ಗಮನ ಹರಿಸಬೇಕು ಎಂದು ಸವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.