ADVERTISEMENT

ಬೆಂಗಳೂರು ವಿಶ್ವವಿದ್ಯಾಲಯ: ಯುವಜನೋತ್ಸವಕ್ಕೆ ಚಾಲನೆ

ಅಂತರ ಕಾಲೇಜು, ಸ್ನಾತಕೋತ್ತರ ವಿಭಾಗಗಳ ಸಾಂಸ್ಕೃತಿಕ ಸ್ಪರ್ಧೆಗಳು

​ಪ್ರಜಾವಾಣಿ ವಾರ್ತೆ
Published 2 ಜನವರಿ 2023, 21:40 IST
Last Updated 2 ಜನವರಿ 2023, 21:40 IST
ಯುವಜನೋತ್ಸವದಲ್ಲಿ ಕಲಾವಿದರೊಂದಿಗೆ ಪ್ರಕಾಶ್‌ ಯೋಗಿ ಗುರೂಜಿ, ಕುಲಪತಿ ಡಾ.ಎಸ್‌.ಎಂ. ಜಯಕರ್‌ ಇದ್ದರು.
ಯುವಜನೋತ್ಸವದಲ್ಲಿ ಕಲಾವಿದರೊಂದಿಗೆ ಪ್ರಕಾಶ್‌ ಯೋಗಿ ಗುರೂಜಿ, ಕುಲಪತಿ ಡಾ.ಎಸ್‌.ಎಂ. ಜಯಕರ್‌ ಇದ್ದರು.   

ಬೆಂಗಳೂರು: ಯುವಪ್ರತಿಭೆಗಳಲ್ಲಿನ ಸೃಜನಶೀಲತೆ ಬೆಳೆಸಿ, ಪೋಷಿಸುವ ಉದ್ದೇಶದಿಂದ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಸೋಮವಾರ ‘ಯುವಜನೋತ್ಸವ–2023’ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಬೆಂಗಳೂರು ವಿಶ್ವವಿದ್ಯಾಲಯ ಮತ್ತು ಸಂಯೋಜಿತ ಕಾಲೇಜುಗಳ ವಿದ್ಯಾರ್ಥಿಗಳು ಈ ಉತ್ಸವದಲ್ಲಿ ಪಾಲ್ಗೊಂಡಿದ್ದರು.

ಸಾಂಸ್ಕೃತಿಕ ಸಂಯೋಜಕ
ಪ್ರೊ. ಕೆ. ರಾಮಕೃಷ್ಣಯ್ಯ ಮಾತನಾಡಿ, ‘ಸುಮಾರು 25 ವರ್ಷಗಳಿಂದ ಬೆಂಗಳೂರು ವಿಶ್ವವಿದ್ಯಾಲಯವು ಯುವಜನೋತ್ಸವ ಕಾರ್ಯಕ್ರಮ
ವನ್ನು ಆಯೋಜಿಸುತ್ತಿದೆ. ಈ ಬಾರಿಯ ಸ್ಪರ್ಧೆಗಳಲ್ಲಿ ಆಯ್ಕೆಯಾದ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರನ್ನು ದಕ್ಷಿಣ ವಲಯದ ಅಂತರ ವಿಶ್ವವಿದ್ಯಾಲಯಗಳ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸಲು ಕಳುಹಿಸಲಾಗುವುದು’ ಎಂದು ತಿಳಿಸಿದರು.

ADVERTISEMENT

‘2022-23ನೇ ಸಾಲಿನಲ್ಲಿ 36ನೇ ದಕ್ಷಿಣ ವಲಯದ ಅಂತರ ವಿಶ್ವವಿದ್ಯಾಲಯಗಳ ಸಾಂಸ್ಕೃತಿಕ ಸ್ಪರ್ಧೆಗಳು ಗುಲ್ಬರ್ಗಾ ವಿಶ್ವವಿದ್ಯಾಲಯದಲ್ಲಿ ಜ.27ರಿಂದ 30ರವರೆಗೆ ನಡೆಯಲಿವೆ’ ಎಂದು ತಿಳಿಸಿದರು. ಉದ್ಘಾಟನಾ ಭಾಷಣ ಮಾಡಿದ ಪತಂಜಲಿ ಯೋಗಾಶ್ರಮ ಟ್ರಸ್ಟ್‌ ಅಧ್ಯಕ್ಷ ಪ್ರಕಾಶ್‌ ಯೋಗಿ ಗುರೂಜಿ, ‘ಸೋಲು–ಗೆಲುವು ಮುಖ್ಯವಲ್ಲ, ಭಾಗವಹಿಸುವುದು ಮುಖ್ಯ’ ಎಂದರು.

ಕುಲಪತಿ ಡಾ. ಎಸ್‌.ಎಂ. ಜಯಕರ, 'ಯುವಜನೋತ್ಸವಕ್ಕೆ ವಿದ್ಯಾರ್ಥಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಭಾರತೀಯ ಸಂಸ್ಕೃತಿ ಮತ್ತು ಯುವ ಶಕ್ತಿ ಅಸ್ಮಿತೆಯ ಅರಿವು ಹೊಂದಿರುವ ಯುವಕರನ್ನು
ಉತ್ತೇಜಿಸುವಲ್ಲಿ ಯುವಜನೋತ್ಸವಗಳು ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ’ ಎಂದರು.

ಕುಲಸಚಿವ ಮಹೇಶ್ ಬಾಬು,
ಪ್ರದರ್ಶನ ಕಲಾ ವಿಭಾಗದ ಪ್ರಾಧ್ಯಾಪಕ ಪ್ರೊ. ಎಸ್.ಎನ್. ಸುಶೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.