ADVERTISEMENT

ಬಿಬಿಎಂಪಿ: ರಸ್ತೆ ಅಗೆದ ಕಂಪನಿಗೆ ₹25 ಲಕ್ಷ ದಂಡ?

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2019, 20:09 IST
Last Updated 8 ಅಕ್ಟೋಬರ್ 2019, 20:09 IST
   

ಬೆಂಗಳೂರು: ಒಎಫ್‌ಸಿ ಕೇಬಲ್ ಅಳವಡಿಸಲು ರಸ್ತೆ ಅಗೆದ ಜಿಯೊ ಡಿಜಿಟಲ್ ಫೈಬರ್ ಲಿಮಿಟೆಡ್‌ ಕಂಪನಿಗೆ ಬಿಬಿಎಂಪಿ ₹25 ಲಕ್ಷ ದಂಡ ವಿಧಿಸಲು ಕ್ರಮ ಕೈಗೊಂಡಿದೆ.

ಸರ್ಜಾಪುರ ಮುಖ್ಯ ರಸ್ತೆಗೆ ಕಳೆದ ವಾರವಷ್ಟೇ ಡಾಂಬರ್ ಹಾಕಲಾಗಿತ್ತು. ಇದೇ 4ರ ಮಧ್ಯರಾತ್ರಿ ಕೇಬಲ್‌ ಅಳವಡಿಸುವ ಕೆಲಸ ನಿರ್ವಹಿಸಿರುವ ಜಿಯೊ ಡಿಜಿಟಲ್ ಫೈಬರ್ ಕಂಪನಿಯ ಗುತ್ತಿಗೆದಾರರಾದ ಶರಣ್ಯ ಕನ್‌ಸ್ಟ್ರಕ್ಷನ್‌ನ ಸಿಬ್ಬಂದಿ ಬೆಳ್ಳಂದೂರು ಗೇಟ್‌ ಹಾಗೂ ಜಿ.ಆರ್‌.ಎಸ್‌ ಟವರ್ ಮುಂಭಾಗ ರಸ್ತೆ ಅಗೆದಿದ್ದಾರೆ.

ಸಾರ್ವಜನಿಕ ಆಸ್ತಿಗೆ ನಷ್ಟ ಉಂಟು ಮಾಡಿದ ಆರೋಪದಲ್ಲಿ ಈ ಕನ್‌ಸ್ಟ್ರಕ್ಷನ್ ಕಂಪನಿ ವಿರುದ್ಧ ಬೆಳ್ಳಂದೂರು ಠಾಣೆಯಲ್ಲಿ ಬಿಬಿಎಂಪಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಮೊಕದ್ದಮೆ ದಾಖಲಿಸಿದ್ದಾರೆ.

ADVERTISEMENT

ಅನುಮತಿ ಪಡೆಯದೆ ರಸ್ತೆ ಅಗೆದು ನಷ್ಟ ಮಾಡಿದ ಕಾರಣಕ್ಕೆ ಜಿಯೊ ಡಿಜಿಟಲ್ ಫೈಬರ್ ಕಂಪನಿಯನ್ನು ಕಪ್ಪುಪಟ್ಟಿಗೆ ಸೇರಿಸುವ ಜತೆಗೆ ₹ 25 ಲಕ್ಷ ದಂಡ ವಿಧಿಸಲು ಕ್ರಮ ಕೈಗೊಳ್ಳುವಂತೆ ಬಿಬಿಎಂಪಿ ಒಎಫ್‌ಸಿ ಕೋಶಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.