ADVERTISEMENT

ಮಹಿಳಾ ಮಾರ್ಷಲ್‌ಗಳನ್ನು ನೇಮಿಸಿದ ಬಿಬಿಎಂಪಿ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2021, 6:50 IST
Last Updated 8 ಮಾರ್ಚ್ 2021, 6:50 IST
ಮಾಸ್ಕ್ ಧರಿಸದವರಿಗೆ ಚರ್ಚ್ ಸ್ಟ್ರೀಟ್‌ನಲ್ಲಿ ಮಹಿಳಾ ಮಾರ್ಷಲ್‌ಗಳು ದಂಡ ವಿಧಿಸಿದರು.
ಮಾಸ್ಕ್ ಧರಿಸದವರಿಗೆ ಚರ್ಚ್ ಸ್ಟ್ರೀಟ್‌ನಲ್ಲಿ ಮಹಿಳಾ ಮಾರ್ಷಲ್‌ಗಳು ದಂಡ ವಿಧಿಸಿದರು.   

ಬೆಂಗಳೂರು: ಸಾರ್ವಜನಿಕ ಸ್ಥಳಗಳಲ್ಲಿ ಕೋವಿಡ್-19 ನಿಯಮಗಳನ್ನು ಪಾಲಿಸದವರಿಗೆ ದಂಡ ವಿಧಿಸಲು ಬಿಬಿಎಂಪಿ ಮಹಿಳಾ ಮಾರ್ಷಲ್‌ಗಳನ್ನು ನೇಮಿಸಿದೆ.

ಇದುವರೆಗೆ ಪುರುಷ ಮಾರ್ಷಲ್ ಗಳನ್ನು ಮಾತ್ರ ಬಿಬಿಎಂಪಿ ನೇಮಿಸಿತ್ತು. ಮಾಸ್ಕ್ಧರಿಸದ್ದಕ್ಕೆ ದಂಡ ವಿಧಿಸಿದಾಗ ಕೆಲವೊಮ್ಮೆ ಮಹಿಳೆಯರು ಮಾರ್ಷಲ್ ಗಳ ಜೊತೆ ಜಗಳ ಕಾಯುತ್ತಿದ್ದರು. ಪರಿಸ್ಥಿತಿ ನಿಭಾಯಿಸಲು ಮಾರ್ಷಲ್ ಗಳು ಹರಸಾಹಸಪಡುತ್ತಿದ್ದರು. ಹಾಗಾಗಿ ಪ್ರಮುಖ ಸಾರ್ವಜನಿಕ ಸ್ಥಳಗಳಲ್ಲಿ ಮಹಿಳಾ ಮಾರ್ಷಲ್ ಗಳ ನೇಮಕ ಮಾಡಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ತಿಳಿಸಿದರು.

ಮಾಸ್ಕ್ ಧರಿಸದವರಿಗೆ ಚರ್ಚ್ ಸ್ಟ್ರೀಟ್‌ನಲ್ಲಿ ಮಹಿಳಾ ಮಾರ್ಷಲ್‌ಗಳು ದಂಡ ವಿಧಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.