ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ವಿವಿಧ ಬಡಾವಣೆಗಳ ವಿವಿಧ ವಿಸ್ತೀರ್ಣಗಳ ಮೂಲೆ ನಿವೇಶನಗಳ ಮೂರನೇ ಹಂತದ ಇ-ಹರಾಜು ಪ್ರಕ್ರಿಯೆಯನ್ನು ಇದೇ 9ರಿಂದ ಅ.3ರವರೆಗೆ ನಡೆಸಲಿದೆ.
ಅರ್ಕಾವತಿ, ಎಚ್.ಎಸ್.ಆರ್, ಜೆ.ಪಿ. ನಗರ, ಬನಶಂಕರಿ, ಜ್ಞಾನಭಾರತಿ ಮತ್ತು ಸರ್.ಎಂ.ವಿಶ್ವೇಶ್ವರಯ್ಯ ಬಡಾವಣೆಗಳ ಒಟ್ಟು 402 ನಿವೇಶನಗಳನ್ನುಇ-ಪ್ರೊಕ್ಯೂರ್ಮೆಂಟ್ ಪೋರ್ಟಲ್ ಮೂಲಕ ಹರಾಜು ಹಾಕಲಿದೆ. ಆರು ಹಂತಗಳಲ್ಲಿ ಇ-ಹರಾಜು ಪ್ರಕ್ರಿಯೆ ನಡೆಯಲಿದ್ದು, ಪ್ರತಿ ಹಂತದಲ್ಲಿ 70 ನಿವೇಶನಗಳನ್ನು ಹರಾಜಿಗೆ ಇಡಲಾಗುತ್ತದೆ.
ಹರಾಜಿಗಿರುವ ಎಲ್ಲಾ ನಿವೇಶನಗಳ ಜಿಯೊ ಮ್ಯಾಪಿಂಗ್ ನಕ್ಷೆಗಳನ್ನು ಬಿಡಿಎ ವೆಬ್ಸೈಟ್ನಲ್ಲಿ (bdabengaluru.org) ಪ್ರಕಟಿಸಲಾಗಿದೆ.
ಇ-ಹರಾಜು ವಿವರ
ಹಂತ; ನಿವೇಶನಗಳ ಕ್ರಮ ಸಂಖ್ಯೆ; ಪ್ರಾರಂಭದ ದಿನಾಂಕ; ಮುಕ್ತಾಯದ ದಿನಾಂಕ
ಮೊದಲ ಹಂತ; 1 ರಿಂದ 70; ಸೆ.09; ಸೆ.25
2ನೇ ಹಂತ; 71 ರಿಂದ 140; ಸೆ.10; ಸೆ. 28
3ನೇ ಹಂತ; 141 ರಿಂದ 210; ಸೆ.11; ಸೆ.29
4ನೇ ಹಂತ; 211 ರಿಂದ 280; ಸೆ.12; ಸೆ.30
5ನೇ ಹಂತ; 281 ರಿಂದ 350; ಸೆ.14; ಅ.1
6ನೇ ಹಂತ; 351 ರಿಂದ 402; ಸೆ.15; ಅ.3
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.