ADVERTISEMENT

ಪೊಲೀಸರಿಗೆ ಧೈರ್ಯ ತುಂಬಿದ ಕಮಿಷನರ್ ಭಾಸ್ಕರ್ ರಾವ್

‘ಅಂತರ ಕಾಪಾಡಿಕೊಳ್ಳಿ; ಬಿಸಿ ನೀರು ಕುಡಿಯಿರಿ’

​ಪ್ರಜಾವಾಣಿ ವಾರ್ತೆ
Published 25 ಮೇ 2020, 20:39 IST
Last Updated 25 ಮೇ 2020, 20:39 IST
ಭಾಸ್ಕರ್ ರಾವ್
ಭಾಸ್ಕರ್ ರಾವ್   

ಬೆಂಗಳೂರು: ನಗರದ ಇಬ್ಬರು ಕಾನ್‌ಸ್ಟೆಬಲ್‌ಗಳಿಗೆ ಕೊರೊನಾ ಸೋಂಕು ತಗುಲಿದ್ದು, ಅವರಿಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದರ ಬೆನ್ನಲ್ಲೇ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ನಗರ ಪೊಲೀಸರಿಗೆ ವಿಶೇಷ ಸಂದೇಶ ರವಾನಿಸಿ ಧೈರ್ಯ ತುಂಬಿದ್ದಾರೆ.

ಕೊರೊನಾ ಸೋಂಕು ಹರಡುವಿಕೆ ತಡೆಗೆ ಲಾಕ್‌ಡೌನ್ ಜಾರಿಯಾದಾಗಿನಿಂದಲೂ ಪೊಲೀಸರು, ಜನರ ಆರೋಗ್ಯ ರಕ್ಷಣೆಗಾಗಿ ಕೆಲಸ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲೂ ಇದೇ ರೀತಿಯಲ್ಲಿ ಕೆಲಸ ಮಾಡುವಂತೆ ಕಮಿಷನರ್ ಹೇಳಿದ್ದಾರೆ.

ಠಾಣೆಗಳಿಗೆ ಸಂದೇಶ ರವಾನಿಸಿರುವ ಅವರು, ‘ಕೊರೊನಾ ವೈರಾಣು ಬಗ್ಗೆ ನಾವೆಲ್ಲರೂ ಜನರಲ್ಲಿ ಅರಿವು ಮೂಡಿಸುತ್ತಿದ್ದೇವೆ. ಪ್ರತಿಯೊಂದು ಸ್ಥಳದಲ್ಲೂ ಭದ್ರತೆ ಒದಗಿಸುತ್ತಿದ್ದೇವೆ. ಕೊರೊನಾ ಯೋಧರಿಗೂ ವೈರಾಣು ಬಿಡುತ್ತಿಲ್ಲ. ನಾವೆಲ್ಲರೂ ಜಾಗೃತರಾಗಿಬೇಕು. ಹಿರಿಯ ಅಧಿಕಾರಿಗಳು ತಮ್ಮ ಸಿಬ್ಬಂದಿಯನ್ನು ಆರೋಗ್ಯವಾಗಿರುವಂತೆ ನೋಡಿಕೊಂಡು ಪರಸ್ಪರ ಸಹಕಾರ ಮನೋಭಾವದಿಂದ ಕೆಲಸ ಮಾಡಬೇಕು’ ಎಂದರು.

ADVERTISEMENT

‘ಠಾಣೆಯಲ್ಲಿ ಅಂತರ ಕಾಯ್ದುಕೊಂಡು ಓಡಾಡಬೇಕು. ಯಾರೇ ಬಂದರೂ ಕಡ್ಡಾಯವಾಗಿ ಸ್ಯಾನಿಟೈಸರ್ ನೀಡಬೇಕು. ಎಲ್ಲರೂ ಬಿಸಿ ನೀರು ಕುಡಿಯಬೇಕು. ಕೆಲ ಠಾಣೆಯಲ್ಲಿ ವಾಷಿಂಗ್ ಮಷಿನ್ ಇರಿಸಲಾಗುವುದು. ಎಲ್ಲರೂ ಅಲ್ಲಿಯೇ ಬಟ್ಟೆ ತೊಳೆದು ಹಾಕಿಕೊಳ್ಳಬಹುದು. ಪೊಲೀಸರ ಕುಟುಂಬಕ್ಕೂ ಸುಸಜ್ಜಿತ ವ್ಯವಸ್ಥೆಯೊಂದಿಗೆ ಕ್ವಾರಂಟೈನ್ ಮಾಡಿಸಲು ಕ್ರಮ ಕೈಗೊಳ್ಳಲಾಗಿದೆ’ ಎಂದೂ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.