ಬೆಂಗಳೂರು: ಆರ್.ಟಿ. ನಗರ ಕಲ್ಚರಲ್ ಅಸೋಸಿಯೇಶನ್ ಮತ್ತು ವಿನಾಯಕ ದೇವಸ್ಥಾನ ಸಮಿತಿ ಜಂಟಿ ಸಹಯೋಗದಲ್ಲಿ ಏ.26–27ರಂದು ವಾರ್ಷಿಕ ಸಂಗೀತ ಉತ್ಸವ ನಡೆಯಲಿದೆ.
ಎರಡನೇ ಬ್ಲಾಕ್‌ನಲ್ಲಿರುವ ಅಂಚೆ ಕಚೇರಿ ಬಳಿಯ ವಿನಾಯಕ ದೇವಸ್ಥಾನ ಸಭಾಂಗಣದಲ್ಲಿ ಏ.26ರಂದು ಸಂಜೆ 5 ಗಂಟೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಮನು ಬಳಿಗಾರ್ ಸಂಗೀತೋತ್ಸವ ಉದ್ಘಾಟಿಸುವರು.
ನಾದರಂಜನಿ ಸಂಸ್ಥೆಯ ಜಿ. ಬಾಬು, ಶ್ರೀರಾಮ ಪ್ರಾಪರ್ಟೀಸ್ ವ್ಯವಸ್ಥಾಪಕ ನಿರ್ದೇಶಕ ಎಂ. ಮುರಳಿ, ಆರ್.ಟಿ. ನಗರ ಕಲ್ಚರಲ್ ಅಸೋಸಿಯೇಶನ್ ಕಾರ್ಯದರ್ಶಿ ಕಣ್ಣನ್ ಉಪಸ್ಥಿತರಿರುವರು. ಪ್ರಖ್ಯಾತ ವಿದುಷಿ ಕನ್ಯಾಕುಮಾರಿ ಅವರಿಂದ ಪಿಟೀಲು ವಾದನ ಕಾರ್ಯಕ್ರಮ ನಡೆಯಲಿದೆ. ಏ.27ರಂದು ಬೆಳಿಗ್ಗೆ 10.30 ಕ್ಕೆ ಟಿ.ಎಸ್.ಸತ್ಯವತಿ ಮತ್ತು ಶಿಷ್ಯೆಯರಿಂದ ಪಂಚರತ್ನ ಗೋಷ್ಠಿ ಗಾಯನ ನಡೆಯಲಿದೆ. ಸಂಜೆ 6 ಗಂಟೆಗೆ ಗಾಯಕ ವಿದ್ಯಾಭೂಷಣ ಅವರ ಸಂಗೀತ ಕಛೇರಿ ಏರ್ಪಡಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.