ಬೆಂಗಳೂರು: ಚಲನಚಿತ್ರ ನಿರ್ದೇಶಕ ಎಸ್.ವಿ. ರಾಜೇಂದ್ರಸಿಂಗ್ ಬಾಬು ಅವರು ಚಲನಚಿತ್ರ ನಿರ್ದೇಶಕರಾಗಿ 50 ವರ್ಷ ಪೂರೈಸಿರುವ ಪ್ರಯುಕ್ತ ಬೆಂಗಳೂರು ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ಅಕ್ಟೋಬರ್ 23ರಿಂದ 27ರವರೆಗೆ ಚಾಮರಾಜಪೇಟೆಯ ಕರ್ನಾಟಕ ಕಲಾವಿದರ ಸಂಘದಲ್ಲಿ ‘ಎಸ್.ವಿ.ಆರ್ @50–ಸಾಧನೆ, ಸಂಭ್ರಮ, ಚಿತ್ರೋತ್ಸವ’ ಆಯೋಜಿಸಲಾಗಿದೆ.
ಇದೇ 23ರಂದು ಬೆಳಿಗ್ಗೆ 10ಕ್ಕೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ನಟ ಸುದೀಪ್ ಪಾಲ್ಗೊಳ್ಳಲಿದ್ದಾರೆ. ಅತಿಥಿಗಳಾಗಿ ಶಿವರಾಜ ತಂಗಡಗಿ, ದಿನೇಶ್ ಗುಂಡೂರಾವ್, ಬರಗೂರು ರಾಮಚಂದ್ರಪ್ಪ, ಗಿರೀಶ್ ಕಾಸರವಳ್ಳಿ, ನಾಗತಿಹಳ್ಳಿ ಚಂದ್ರಶೇಖರ್, ಹಂಸಲೇಖ, ರಾಘವೇಂದ್ರ ರಾಜ್‌ಕುಮಾರ್ ಭಾಗವಹಿಸಲಿದ್ದಾರೆ. ಮಧ್ಯಾಹ್ನ 12ಕ್ಕೆ ‘ಹೂವು ಹಣ್ಣು’, 3.30ಕ್ಕೆ ‘ಅಂತ’ ಚಲನಚಿತ್ರ ಪ್ರದರ್ಶನ ನಡೆಯಲಿದೆ.
ಅ. 24ರಂದು ಬೆಳಿಗ್ಗೆ 10.30ಕ್ಕೆ ‘ಭೂಮಿ ತಾಯಿಯ ಚೊಚ್ಚಲ ಮಗ’, ‘ಕುರಿಗಳು ಸಾರ್ ಕುರಿಗಳು’ ಅ. 25ರಂದು ಬೆಳಿಗ್ಗೆ 10.30ಕ್ಕೆ ‘ಬಂಧನ’, ಮಧ್ಯಾಹ್ನ 2.30ಕ್ಕೆ ‘ಗಂಡಭೇರುಂಡ’ ಅ. 26ರಂದು ಬೆಳಿಗ್ಗೆ 10.30ಕ್ಕೆ ‘ಮುತ್ತಿನಹಾರ’, ಮಧ್ಯಾಹ್ನ 2.30ಕ್ಕೆ ‘ನಾಗರಹೊಳೆ’ ಚಲನಚಿತ್ರಗಳು ಪ್ರದರ್ಶನಗೊಳ್ಳಲಿವೆ.
ಅ. 27ರಂದು ಬೆಳಿಗ್ಗೆ 11.30ಕ್ಕೆ ಜೆ.ಸಿ. ರಸ್ತೆಯ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುವ ಸಮಾರೋಪ ಸಮಾರಂಭದಲ್ಲಿ ಎಸ್.ವಿ. ರಾಜೇಂದ್ರಸಿಂಗ್ ಬಾಬು ಅವರಿಗೆ ಸನ್ಮಾನ ನಡೆಯಲಿದ್ದು, ಸಂಜೆ 6.30ಕ್ಕೆ ನಡೆಯುವ ವೇದಿಕೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪಾಲ್ಗೊಳ್ಳಲಿದ್ದಾರೆ.
ಬೆಂಗಳೂರು: ಸುಸ್ವರಲಯ ಪ್ರೌಢ ಸಂಗೀತ ಕಲಾ ಶಾಲೆಯ ವಾರ್ಷಿಕೋತ್ಸವ, ಬಿರುದು ಪ್ರದಾನ ಹಾಗೂ ಸಂಗೀತ ಕಛೇರಿ ಅಕ್ಟೋಬರ್ 24ರಿಂದ 26ರವರೆಗೆ ಬಸವನಗುಡಿಯ ಬಿ.ಪಿ. ವಾಡಿಯಾ ರಸ್ತೆಯಲ್ಲಿರುವ ದಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌ನಲ್ಲಿ ನಡೆಯಲಿದೆ.
ಅ. 24ರಂದು ಸಂಜೆ 4ಕ್ಕೆ ವಿದ್ವಾನ್ ಎಂ. ವಾಸುದೇವರಾವ್ ಅವರು ಸಮಾರಂಭ ಉದ್ಘಾಟಿಸಲಿದ್ದಾರೆ. ಗಾಯಕ ಕಾಂಚನ ಈಶ್ವರ ಭಟ್ ಅವರಿಗೆ ಸ್ವರಲಯ ರತ್ನ ಬಿರುದು ಪ್ರದಾನ ಮಾಡಲಾಗುತ್ತದೆ. ವೀಣಾ ವಾದಕಿ ಗೀತಾ ರಮಾನಂದ್ ಅವರಿಗೆ ‘ಸ್ವರಲಯಶೃಂಗ’ ಬಿರುದು ಪ್ರದಾನ ಮಾಡಲಾಗುತ್ತದೆ. ಸಂಜೆ 6.15ರಿಂದ ಗೀತಾ ರಮಾನಂದ, ಕಾಂಚನಾ ಎ. ಈಶ್ವರ್ ಭಟ್, ಶಮಿತ್ ಎಸ್. ಗೌಡ ಅವರು ಸಂಗೀತ ಕಛೇರಿ ನಡೆಸಿಕೊಡಲಿದ್ದಾರೆ. ಅ. 25ರಂದು ಬೆಳಿಗ್ಗೆ 9.30ರಿಂದ ತಾಳವಾದ್ಯ ಹಾಗೂ ಸಂಗೀತ ಕಛೇರಿ ನಡೆಯಲಿದೆ. ಅ. 26ರಂದು ವಿವಿಧ ಸಂಗೀತ ಕಛೇರಿಗಳು ನಡೆಯಲಿವೆ.
ಸಂಪರ್ಕ: 94480 59595.
ಬೆಂಗಳೂರು: ಜೆ.ಪಿ. ನಗರದ ರಂಗಶಂಕರದಲ್ಲಿ ಅಕ್ಟೋಬರ್ 24ರಿಂದ ನವೆಂಬರ್ 1ರವರೆಗೆ ಥಿಯೇಟರ್ ಫೆಸ್ಟಿವೆಲ್ ನಡೆಯಲಿದೆ.
ಅ. 24ರಂದು ‘ಕವನ ಎ. ಅಂಬೇಡ್ಕರೈಟ್ ಒಪೇರಾ’, ಅ. 25ರಂದು ‘ಸಮ್ಥಿಂಗ್ ಲೈಕ್ ಟ್ರುತ್’, ಅ.26ರಂದು ‘ಆಖಿರ್‌ಕಾರ್’, ಅ. 31ರಂದು ‘ನಾಮ್ ಮೇ ಕಾ ರಖು ಹೈ’, ನ.1ರಂದು ‘ಕತ್ತಲ ನೆರಳು’ ಕುರಿತು ವಿವಿಧ ತಜ್ಞರು ಚರ್ಚಿಸಲಿದ್ದಾರೆ.
ಬೆಂಗಳೂರು: ಮನೋಜ್ ಭಟ್ ಹೆಗ್ಗಾರಳ್ಳಿ ಅವರ ಸಂಯೋಜನೆಯಲ್ಲಿ ಇದೇ 25ರಂದು ರಾತ್ರಿ 9.45ಕ್ಕೆ ರವೀಂದ್ರ ಕಲಾಕ್ಷೇತ್ರದಲ್ಲಿ ‘ಯಕ್ಷ ಷಡಾನನ’ ಎಂಬ ಐದು ಪೌರಾಣಿಕ ಪ್ರಸಂಗಗಳ ಪ್ರದರ್ಶನ ನಡೆಯಲಿದೆ. ‘ಧರ್ಮಾಂಗದ’, ‘ಮಾಗಧ’, ‘ರುದ್ರಕೋಪ’, ‘ಮಾಗಧ’ ಹಾಗೂ ‘ಗದಾಯುದ್ಧ’ ಪ್ರಸಂಗಗಳು ಜರುಗಲಿವೆ. ಸಂಪರ್ಕ: 98806 04186.
ಪ್ರತಿ ಗುರುವಾರ ಪ್ರಕಟವಾಗುವ ‘ಸಾಂಸ್ಕೃತಿಕ ಮುನ್ನೋಟ’ ಅಂಕಣದಲ್ಲಿ ಪ್ರಕಟಿಸಲು ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಂಬಂಧಿಸಿದ ವಿವರಗಳನ್ನು ಈ ಕೆಳಗಿನ ಇ–ಮೇಲ್‌ಗೆ (ಬುಧವಾರ ಸಂಜೆ 6 ಗಂಟೆ ಒಳಗೆ) ಕಳುಹಿಸಿ
nagaradalli_indu@prajavani.co.in
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.