ಬೆಂಗಳೂರು: ಆಸ್ಟರ್ ಡಿಎಂ ಹೆಲ್ತ್ ಕೇರ್ ಸಂಸ್ಥೆಯು ‘ಆಸ್ಟರ್ ಗಾರ್ಡಿಯನ್ಸ್ ಗ್ಲೋಬಲ್ ನರ್ಸಿಂಗ್ ಪ್ರಶಸ್ತಿ’ಗೆ ನಾಮನಿರ್ದೇಶನ ಪ್ರಾರಂಭಿಸಿದೆ.
ನಾಲ್ಕನೇ ಆವೃತ್ತಿಯ ಪ್ರಶಸ್ತಿಯು ₹ 2 ಕೋಟಿ ನಗದು ಒಳಗೊಂಡಿದೆ. ಅರ್ಜಿ ಸಲ್ಲಿಕೆಗೆ ಮುಕ್ತ ಅವಕಾಶ ನೀಡಲಾಗಿದೆ. ವೈದ್ಯಕೀಯ ಕ್ಷೇತ್ರಕ್ಕೆ ನೀಡಿದ ಅಸಾಧಾರಣ ಕೊಡುಗೆಯನ್ನು ಪರಿಗಣಿಸಿ, ಆಯ್ಕೆ ಮಾಡಲಾಗುತ್ತದೆ. ಇದಕ್ಕೆ ತಜ್ಞ ತೀರ್ಪುಗಾರರ ಸಮಿತಿ ಇರಲಿದೆ. ಅಂತಿಮವಾಗಿ 10 ಮಂದಿಗೆ ಈ ಪ್ರಶಸ್ತಿ ನೀಡಲಾಗುತ್ತದೆ. ವಿಜೇತರ ಹೆಸರನ್ನು 2025ರ ಮೇ ತಿಂಗಳಲ್ಲಿ ಅಂತರರಾಷ್ಟ್ರೀಯ ಶುಶ್ರೂಷಕರ ದಿನದಂದು ಘೋಷಿಸಲಾಗುತ್ತದೆ ಎಂದು ಸಂಸ್ಥೆ ತಿಳಿಸಿದೆ.
ಅರ್ಹ ಶುಶ್ರೂಷಕರು www.asterguardians.com ಮೂಲಕ ಪ್ರಶಸ್ತಿಗೆ ಅರ್ಜಿ ಸಲ್ಲಿಸಬಹುದು. ಶುಶ್ರೂಷಕರು ಸಮಾಜಕ್ಕೆ ನೀಡುತ್ತಿರುವ ಕೊಡುಗೆಯನ್ನು ಗೌರವಿಸುವ ಉದ್ದೇಶದಿಂದ ಈ ಪ್ರಶಸ್ತಿ ಸ್ಥಾಪಿಸಲಾಗಿದೆ. ಭವಿಷ್ಯದಲ್ಲಿ ಈ ವೃತ್ತಿಗೆ ಬರುವವರಿಗೆ ಪ್ರೇರಣೆಯೂ ಆಗಲಿದೆ ಎಂದು ಸಂಸ್ಥೆಯ ಸಂಸ್ಥಾಪನಾಧ್ಯಕ್ಷ ಆಜಾದ್ ಮೂಪೆನ್ ಪ್ರಕಟಣೆಯಲ್ಲಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.