ಕೆ.ಆರ್.ಪುರ: ಕನ್ನಡ, ನೆಲ, ಜಲ, ಸಾಮಾಜಿಕ ನ್ಯಾಯ, ಶೋಷಣೆಯಂತಹ ವಿಚಾರಗಳಲ್ಲಿ ಜಾತಿ ಧರ್ಮಗಳನ್ನು ಬದಿಗಿಟ್ಟು ಎಲ್ಲಾ ಸಂಘಟನೆಗಳನ್ನು ಒಳಗೊಂಡ ಒಕ್ಕೂಟವೊಂದು ಆಸ್ತಿತ್ವಕ್ಕೆ ಬರಲಿದೆ ಭಾರತೀಯರ ಸೇವಾ ಸಮಿತಿಯ ರಾಷ್ಟ್ರೀಯ ಅಧ್ಯಕ್ಷ ಹೆಚ್.ಎಂ.ರಾಮಚಂದ್ರ ಹೇಳಿದರು.
ಕೆ.ಆರ್.ಪುರ ಸಮೀಪದ ಹೂಡಿಯಲ್ಲಿ ಹಮ್ಮಿಕೊಂಡಿದ್ದ ಭಾರತೀಯರ ಸರ್ವ ಸಂಘಟನೆಗಳ ಸಮಾನತೆ ಒಕ್ಕೂಟದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ರಾಜ್ಯದಲ್ಲಿ ಯಾವುದೇ ಮೂಲೆಯಲ್ಲಿ ಯಾವುದೇ ರೀತಿಯ ಸಮಸ್ಯೆ ಇರಲಿ, ಬಡವ– ಬಲ್ಲಿದ, ಮೇಲು ಕೀಳು ಎನ್ನದೆ ಜಾತಿ ಧರ್ಮ ಬದಿಗಿಟ್ಟು ಸಮಾನತೆಯ ಹಕ್ಕುಗಳಿಗಾಗಿ ಎಲ್ಲಾ ಧರ್ಮ, ಜಾತಿ ಸಂಘಟನೆಗಳನ್ನು ಒಂದೇ ವೇದಿಕೆಯ ಮೂಲಕ ರಾಜ್ಯದಾದ್ಯಂತ ಹೋರಾಟ ರೂಪಿಸಲು ಭಾರತೀಯರ ಸರ್ವ ಸಂಘಟನೆಗಳ ಸಮಾನತೆ ಒಕ್ಕೂಟವನ್ನು ರಚಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಚಿಂತಾಮಣಿ ಅಮರ್, ದೇವರಾಜ್, ಮುನಿಮಾರಪ್ಪ, ಬಸವರಾಜ ಪಡುಕೋಟೆ, ನಸ್ರು, ಡಾ. ಅಜಿತ್ ಕುಮಾರ್, ಕೃಷ್ಣಮೂರ್ತಿ, ಸೋಣಪ್ಪ, ಅಂಜಿನಪ್ಪ ಯಾದವ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.