ADVERTISEMENT

ಟ್ಯಾಬ್, ದಿನಸಿ ಕಿಟ್‌ ವಿತರಣೆ

​ಪ್ರಜಾವಾಣಿ ವಾರ್ತೆ
Published 28 ಜುಲೈ 2021, 2:59 IST
Last Updated 28 ಜುಲೈ 2021, 2:59 IST
ಭೀಮಾ ಜ್ಯುವೆಲ್ಲರ್ಸ್‌ ವತಿಯಿಂದ ಬಡವರಿಗೆ ದಿನಸಿ ಕಿಟ್ ವಿತರಿಸಲಾಯಿತು.
ಭೀಮಾ ಜ್ಯುವೆಲ್ಲರ್ಸ್‌ ವತಿಯಿಂದ ಬಡವರಿಗೆ ದಿನಸಿ ಕಿಟ್ ವಿತರಿಸಲಾಯಿತು.   

ಬೆಂಗಳೂರು: ಭೀಮಾ ಜ್ಯುವೆಲ್ಲರ್ಸ್‌ನ ಕೋರಮಂಗಲದ ಮಳಿಗೆಯಲ್ಲಿ ಸಂಸ್ಥೆಯ 97ನೇ ಸಂಸ್ಥಾಪನಾದಿನದಅಂಗವಾಗಿ ಬಡ ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್‌ ಹಾಗೂ ಬಡ ಕುಟುಂಬಗಳಿಗೆ ದಿನಸಿ ಕಿಟ್ ವಿತರಿಸಲಾಯಿತು.

ಕೋವಿಡ್‌ನಿಂದ ಸಂಕಷ್ಟ ಅನುಭವಿಸಿರುವ ಜನರಿಗೆ ನೆರವಾಗುವ ಉದ್ದೇಶದಿಂದಒನ್ಬಿಲಿಯನ್ಲಿಟರೇಟ್ಸ್ಫೌಂಡೇಷನ್ ಮೂಲಕ ₹4.75 ಲಕ್ಷ ವೆಚ್ಚದಲ್ಲಿ 50 ಟ್ಯಾಬ್‌ಗಳನ್ನು ಬಡ ವಿದ್ಯಾರ್ಥಿಗಳಿಗೆ ನೀಡಲಾಯಿತು.

ನಾಗವಾರ ಪಾಳ್ಯ,ಕಗ್ಗದಾಸಪುರ,ವಿದ್ಯಾರಣ್ಯಪುರದ ವಲಸೆ ಮತ್ತು ದಿನಗೂಲಿ ನೌಕರರು ಹಾಗೂ ತೃತೀಯ ಲಿಂಗಿಗಳು ಸೇರಿದಂತೆ 500 ಮಂದಿಗೆ ₹5 ಲಕ್ಷ ವೆಚ್ಚದಲ್ಲಿ ದಿನಸಿ ಕಿಟ್‌ಗಳನ್ನು ವಿತರಿಸಿತು.

ADVERTISEMENT

ಭೀಮಾಜ್ಯುವೆಲ್ಲರ್ಸ್‍ನಬೆಂಗಳೂರು ವಿಭಾಗದ ವಿಷ್ಣು ಶರಣ್ ಕೆ.ಭಟ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.