ADVERTISEMENT

ಬಿಐಸಿ: ಬೆಂಗಳೂರಿನ ಕಿರುಚಿತ್ರಗಳ ಆಹ್ವಾನ

​ಪ್ರಜಾವಾಣಿ ವಾರ್ತೆ
Published 27 ಜುಲೈ 2021, 19:52 IST
Last Updated 27 ಜುಲೈ 2021, 19:52 IST

ಬೆಂಗಳೂರು: ನಗರದ ವೈಶಿಷ್ಟಗಳನ್ನು ಕಿರು ದೃಶ್ಯಗಳ ಮೂಲಕ ಪ್ರಚುರ ಪಡಿಸಲುಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರವು (ಬಿಐಸಿ) ‘ಬಿ.ಲೋರ್‌’ ಶೀರ್ಷಿಕೆಯಡಿ ದೃಶ್ಯ ನಿರೂಪಣೆ ಸರಣಿಗೆ ಆಸಕ್ತರಿಂದ ಕಿರುಚಿತ್ರಗಳನ್ನು ಆಹ್ವಾನಿಸಿದೆ.

ನಗರದ ಇತಿಹಾಸ, ರಚನೆ, ಸ್ವಾತಂತ್ರ್ಯ ಪೂರ್ವ, ನೈಸರ್ಗಿಕ, ಕೈಗಾರಿಕಾ, ಸಂಸ್ಕೃತಿ, ಪದ್ಧತಿಗಳು, ಉಪಭಾಷೆಗಳು, ಆಹಾರ, ಕೆಲಸ, ಪರಂಪರೆ, ಕಲೆಗಳು,ಸ್ಪೂರ್ತಿದಾಯಕ ಕಥೆಗಳು, ವ್ಯಕ್ತಿತ್ವ ತೋರಿಸಬಹುದು. ಕಿರುಚಿತ್ರ ಯಾವುದೇ ಭಾಷೆಯಲ್ಲಿರಬಹುದು. ಇಂಗ್ಲಿಷ್‌ನಲ್ಲಿಸಬ್‌ಟೈಟಲ್‌ ಕಡ್ಡಾಯ. ಗರಿಷ್ಠ 4 ನಿಮಿಷಗಳ ಕಿರುಚಿತ್ರಗಳನ್ನು ಆಯ್ಕೆ ಮಾಡಲಾಗುವುದು. ಬಿ.ಲೋರ್‌ ಭಾಗವಾಗಿ ಆಯ್ಕೆ
ಯಾಗುವ ಕಿರುಚಿತ್ರಕ್ಕೆ ₹20 ಸಾವಿರ ಗೌರವಧನ ನೀಡಲಾಗುವುದು.

ಚಿತ್ರದ ಕರಡನ್ನುhttps://forms.gle/QjC1PeaogLbGx1Y56 ಮೂಲಕ ಸಲ್ಲಿಸಬಹುದು. bic@bangaloreinternationalcentre.org ಅನ್ನು ಸಂಪರ್ಕಿಸಬಹುದು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.