ಬೆಂಗಳೂರು: ಜಾಲಿ ರೈಡ್‍ಗಾಗಿ ಬೈಕ್‍ಗಳನ್ನು ಕದಿಯುತ್ತಿದ್ದ ಆರೋಪಿಯನ್ನು ಶಿವಾಜಿನಗರ ಪೊಲೀಸರು ಬಂಧಿಸಿದ್ದಾರೆ. ಆತನ ಬಳಿಯಿದ್ದ ಆರು ಬೈಕ್‍ಗಳನ್ನು ವಶಕ್ಕೆ ಪಡೆದಿದ್ದಾರೆ.
ಭಾರತಿನಗರದ ನಿವಾಸಿ ಸೈಯದ್ ನಾಸಿರ್ ಬಂಧಿತ ಆರೋಪಿ. ನೈಟ್ ರೈಡ್, ಜಾಲಿ ರೈಡ್‍ಗೆಂದೇ ಶೋಕಿ ಮಾಡಲು ಈತ ದುಬಾರಿ ಬೈಕ್‍ಗಳನ್ನು ಕದಿಯುತ್ತಿದ್ದ ಎನ್ನಲಾಗಿದೆ.
ಬೈಕ್ ಕಳವು ಪ್ರಕರಣದಲ್ಲಿ ನಾಸಿರ್‌ನನ್ನು ಈ ಹಿಂದೆಯೂ ಬಂಧಿಸಲಾಗಿತ್ತು. ಜೈಲಿನಿಂದ ಹೊರಬಂದ ಮೇಲೆ ಮತ್ತೆ ಬೈಕ್ ಕಳ್ಳತನ ಮುಂದುವರಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.