ADVERTISEMENT

ವಜ್ರ ಬಸ್‌ ಪ್ರಯಾಣ ದರ ಇಳಿಕೆ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2020, 20:35 IST
Last Updated 28 ಡಿಸೆಂಬರ್ 2020, 20:35 IST
ಬಿಎಂಟಿಸಿ ವಜ್ರ ಬಸ್‌
ಬಿಎಂಟಿಸಿ ವಜ್ರ ಬಸ್‌    

ಬೆಂಗಳೂರು: ಬಿಎಂಟಿಸಿ ಹವಾನಿಯಂತ್ರಿತ ‘ವಜ್ರ’ ಬಸ್‌ಗಳಿಗೆ ಪ್ರಯಾಣಿಕರನ್ನು ಸೆಳೆಯಲು ಮುಂದಾಗಿರುವ ಬಿಎಂಟಿಸಿ, ಪ್ರಯಾಣದರ ಮತ್ತು ಪಾಸ್‌ಗಳ ದರ ಇಳಿಕೆ ಮಾಡಲು ನಿರ್ಧರಿಸಿದೆ.

‘ಪ್ರಯಾಣ ದರ, ಮಾಸಿಕ ಮತ್ತು ದೈನಂದಿನ ಪಾಸ್ ದರದಲ್ಲಿ ಶೇ 20ರಷ್ಟು ಕಡಿಮೆಯಾಗಲಿದ್ದು, ಜ.1ರಿಂದ ಹೊಸ ದರ ಅನ್ವಯವಾಗಲಿದೆ. ಸಾಮಾನ್ಯ ಬಸ್‌ಗಳು ಮತ್ತು ವಾಯುವಜ್ರ ಬಸ್‌ಗಳ ಪ್ರಯಾಣ ದರದಲ್ಲಿ ಯಾವುದೇ ಬದಲಾವಣೆ ಇಲ್ಲ’ ಎಂದು ಬಿಎಂಟಿಸಿ ಸ್ಪಷ್ಟಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT