ADVERTISEMENT

ಮನೆ ಬಾಗಿಲಿಗೆ ಶಾಲೆ

​ಪ್ರಜಾವಾಣಿ ವಾರ್ತೆ
Published 21 ಜನವರಿ 2021, 18:35 IST
Last Updated 21 ಜನವರಿ 2021, 18:35 IST
ಹೊಸ ರೂಪ ಪಡೆದಿರುವ ಬಿಎಂಟಿಸಿ ಹಳೇ ಬಸ್
ಹೊಸ ರೂಪ ಪಡೆದಿರುವ ಬಿಎಂಟಿಸಿ ಹಳೇ ಬಸ್   

ಬೆಂಗಳೂರು: ಬಿಎಂಟಿಸಿ ಹಳೇ ಬಸ್‌ಗಳಿಗೆ ಹೊಸ ರೂಪ ನೀಡಲಾಗಿದ್ದು, ಇವುಗಳ ಮೂಲಕ ಬಿಬಿಎಂಪಿಯು ‘ಮನೆಯ ಬಾಗಿಲಿಗೆ ಶಾಲೆ’ ಕಾರ್ಯಕ್ರಮ ರೂಪಿಸಿದೆ.

10 ಹಳೇ ಬಸ್‌ಗಳನ್ನು ಬಿಬಿಎಂಪಿ ಶಾಲೆಗಳಿಗೆ ಬಿಟ್ಡುಕೊಡಲು ಬಿಎಂಟಿಸಿ ನಿರ್ಧರಿಸಿದೆ. ಇದಕ್ಕಾಗಿ ವಿಶೇಷ ವಿನ್ಯಾಸದೊಂದಿಗೆ ಬಸ್‌ಗಳನ್ನು ಪರಿವರ್ತಿಸಲಾಗಿದೆ. ಶಾಲೆ ಬಿಟ್ಟ ಮಕ್ಕಳನ್ನು ಕರೆ ತರಲು ಈ ಬಸ್‌ಗಳನ್ನು ಬಳಕೆ ಮಾಡಲು ಬಿಬಿಎಂಪಿ ನಿರ್ಧರಿಸಿದೆ.

ತಲಾ ₹4 ಲಕ್ಷದಂತೆ ಬಿಬಿಎಂಪಿ ಬಸ್‌ ಖರೀದಿಸಿದೆ. ಪರಿವರ್ತನೆಗೊಂಡ ಶಾಲಾ ವಾಹನಗಳಲ್ಲಿ ವಿನೈಲ್ ಫ್ಲೋರಿಂಗ್ ಮತ್ತು ಶಿಕ್ಷಕರು ಕಲಿಸಲು ಅಗತ್ಯ ಇರುವ ಬಿಳಿ ಬೋರ್ಡ್, ಸಿಬ್ಬಂದಿಗೆ ಕುರ್ಚಿ ವ್ಯವಸ್ಥೆ ಕಲ್ಪಿಸಲಾಗಿದೆ. ಬಡ ಮಕ್ಕಳು ಶಾಲೆಯಿಂದ ಹೊರಗುಳಿಯಬಾರದು ಎಂಬ ಉದ್ದೇಶದಿಂದ ಬಿಬಿಎಂಪಿ ಸಹಯೋಗದಲ್ಲಿ ಈ ಕಾರ್ಯಕ್ರಮ ರೂಪಿಸಲಾಗಿದೆ ಎಂದು ಬಿಎಂಟಿಸಿ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.