ADVERTISEMENT

ಬೆಂಗಳೂರು: ಮೇ 6ರಿಂದ 12ರವರೆಗೆ ಬೋಧಿ ಸಪ್ತಾಹ

​ಪ್ರಜಾವಾಣಿ ವಾರ್ತೆ
Published 2 ಮೇ 2025, 21:49 IST
Last Updated 2 ಮೇ 2025, 21:49 IST
ಗೌತಮ ಬುದ್ಧ
ಗೌತಮ ಬುದ್ಧ   

ಬೆಂಗಳೂರು: ಮಹಾ ಬೋಧಿ ಸೊಸೈಟಿಯು ಬುದ್ಧ ಪೂರ್ಣಿಮೆಯ ಅಂಗವಾಗಿ ಇದೇ 6ರಿಂದ 12ರವರೆಗೆ ಮಹಾಬೋಧಿ ಲೋಕ ಶಾಂತಿ ಬುದ್ಧ ವಿಹಾರದಲ್ಲಿ ಬೋಧಿ ಸಪ್ತಾಹ ಹಮ್ಮಿಕೊಂಡಿದೆ. 

ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮತನಾಡಿದ ಸೊಸೈಟಿ ನಿರ್ದೇಶಕ ಬುದ್ಧ ದತ್ತ ಬಂತೇಜಿ, ‘6ರಂದು ಬೆಳಿಗ್ಗೆ 10 ಗಂಟೆಗೆ ಮಹಾಬೋಧಿ ಸೊಸೈಟಿಯ ಅಧ್ಯಕ್ಷ ಭಿಕ್ಕು ಕಸಪ ಮಹಾಥೇರೊ ಅವರು ಸಪ್ತಾಹಕ್ಕೆ ಚಾಲನೆ ನೀಡಲಿದ್ದಾರೆ. ನಗರದ ವಿವಿಧ ಕಾಲೇಜುಗಳಲ್ಲಿ ಉಪನ್ಯಾಸವನ್ನೂ ಹಮ್ಮಿಕೊಳ್ಳಲಾಗಿದೆ’ ಎಂದು ಹೇಳಿದರು.

‘12ರಂದು ಬೆಳಿಗ್ಗೆ 9ರಿಂದ ರಾತ್ರಿ 8 ಗಂಟೆಯವರೆಗೆ ಬುದ್ಧ ಜಯಂತಿ ನಡೆಯಲಿದ್ದು, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಕಾರ್ಯಕ್ರಮ ಉದ್ಘಾಟಿಸುತ್ತಾರೆ. ಅಂದು ಬೆಳಿಗ್ಗೆ 10.45ಕ್ಕೆ ಹಳೆ ವಿಹಾರದಿಂದ ಮಹಾಬೋಧಿ ಲೋಕ ಶಾಂತಿ ಬುದ್ಧ ವಿಹಾರದ ವರೆಗೆ ಬೌದ್ಧ ಮೆರವಣಿಗೆ ನಡೆಯಲಿದೆ. ಕಾರ್ಯಕ್ರಮದಲ್ಲಿ ಎಲ್ಲ ಧರ್ಮಗಳ ಗುರುಗಳು ಭಾಗವಹಿಸಲಿದ್ದಾರೆ’ ಎಂದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.