ADVERTISEMENT

ಪೌತಿ ಖಾತೆ ಬದಲಾವಣೆಗೆ ಲಂಚ: ಗ್ರಾಮ ಲೆಕ್ಕಿಗನ ಬಂಧನ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2021, 21:31 IST
Last Updated 10 ಮಾರ್ಚ್ 2021, 21:31 IST

ಬೆಂಗಳೂರು: ಪೌತಿ ಖಾತೆ ಬದಲಾವಣೆಗಾಗಿ ವ್ಯಕ್ತಿಯೊಬ್ಬರಿಂದ ₹ 60,000 ಲಂಚ ಪಡೆದ ಆರೋಪದ ಮೇಲೆ ಬೆಂಗಳೂರು ದಕ್ಷಿಣ ತಾಲ್ಲೂಕಿನ ತಾವರೆಕೆರೆ ಗ್ರಾಮದ ಚುಂಚನಕುಪ್ಪೆಯ ಗ್ರಾಮ ಲೆಕ್ಕಿಗ ಎಂ. ಸತೀಶ್ ಕುಮಾರ್‌ ಅವರನ್ನು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಬುಧವಾರ ಬಂಧಿಸಿದೆ.

ನಗರದ ಮರಿಯಪ್ಪನಪಾಳ್ಯದ ನಿವಾಸಿಯೊಬ್ಬರು ಪುರದಪಾಳ್ಯ ಗ್ರಾಮದಲ್ಲಿ ಹೊಂದಿರುವ ಜಮೀನಿನ ಖಾತೆಯನ್ನು ಪೌತಿ ಖಾತೆ ಆಧಾರದಲ್ಲಿ ಬದಲಾವಣೆ ಮಾಡಿಕೊಡುವಂತೆ ತಾವರೆಕೆರೆ ನಾಡ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ₹ 60,000 ಲಂಚಕ್ಕೆ ಬೇಡಿಕೆ ಇಟ್ಟಿದ್ದ ಸತೀಶ್‌ ಕುಮಾರ್‌, ಮೊದಲೇ ₹ 55,000 ಪಡೆದಿದ್ದರು. ಕೊನೆಯ ₹ 5,000ಕ್ಕಾಗಿ ಒತ್ತಾಯಿಸುತ್ತಿದ್ದರು. ಈ ಕುರಿತು ಅರ್ಜಿದಾರರು ಎಸಿಬಿ ಕಚೇರಿಗೆ ದೂರು ನೀಡಿದ್ದರು.

ಪ್ರಕರಣ ದಾಖಲಿಸಿಕೊಂಡ ಎಸಿಬಿ ರಾಮನಗರ ಘಟಕದ ಅಧಿಕಾರಿಗಳು ಬುಧವಾರ ಕಾರ್ಯಾಚರಣೆ ನಡೆಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.