ಬೆಂಗಳೂರು: ಶ್ರೀ ಅಯ್ಯಪ್ಪನ್ ಕೈಗಾರಿಕಾ ತರಬೇತಿ ಸಂಸ್ಥೆಯು ಎಲೆಕ್ಟ್ರಾನಿಕ್ಸ್ ವೃತ್ತಿಯಲ್ಲಿ ತರಬೇತಿ ನೀಡಲು ಅರ್ಜಿ ಆಹ್ವಾನಿಸಿದೆ.
ಎಸ್‌ಎಸ್‌ಎಲ್‌ಸಿ ಉತ್ತೀರ್ಣರಾದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಎಲ್ಲ ವರ್ಗದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲಾಗುತ್ತದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಳಿಗೆ ಟೂಲ್ ಕಿಟ್, ಸಮವಸ್ತ್ರ ಹಾಗೂ ಲ್ಯಾಪ್‌ಟಾಪ್‌ಗಳನ್ನು ಉಚಿತವಾಗಿ ನೀಡಲಾಗುತ್ತದೆ. ಆಸಕ್ತರು ಅರ್ಜಿ ಸಲ್ಲಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
ವಿಳಾಸ: ಶ್ರೀ ಅಯ್ಯಪ್ಪನ್ ಶಿಕ್ಷಣ ಸಂಸ್ಥೆಗಳು, ಎಂ.ಎಂ. ಅಡ್ಡ ರಸ್ತೆ, ಏರ್‌ಟೆಲ್ ಆಫೀಸ್ ಹಿಂಭಾಗ, ಜಯಮಹಲ್ ರಸ್ತೆ, ಬೆಂಗಳೂರು–560046. ಮಾಹಿತಿಗೆ: 080–23433008, 98869 64437.
ಪದಾಧಿಕಾರಿಗಳ ಆಯ್ಕೆ
ಬೆಂಗಳೂರು: ವೈಟ್‌ಫೀಲ್ಡ್ ಏರಿಯಾ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್ ಅಸೋಸಿಯೇಷನ್‌ನ (ಡಬ್ಲ್ಯೂಎಸಿಐಎ) 2025–26ನೇ ಸಾಲಿಗೆ ಎಸ್. ಚಂದ್ರಶೇಖರನ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಶ್ರೀನಿವಾಸ್ ಕುಮಾರ್ ಸಿ. (ಚುನಾಯಿತ ಅಧ್ಯಕ್ಷ), ಶ್ರೀನಿವಾಸರಾಜು ಜೆ. (ಉಪಾಧ್ಯಕ್ಷ), ರಾಘವ ಕೆ. (ಕಾರ್ಯದರ್ಶಿ), ರಂಗಾರೆಡ್ಡಿ (ಜಂಟಿ ಕಾರ್ಯದರ್ಶಿ), ಅಜಯ್ ಬನ್ಸಾಲ್ (ಖಜಾಂಚಿ). ಹರಿಪ್ರಸಾದ್ ರೆಡ್ಡಿ, ದಿನೇಶ್ ಸಿ.ಎಚ್., ರೋಹನ್ ನಾಯಕ್, ವಿ. ಸೋಮಸುಂದರಂ, ಶಿವಕುಮಾರ್ ಎಂ., ಕುನಾಲ್ ವರ್ಮಾ ಅವರು ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.