ADVERTISEMENT

ಜೆರಿಮಿ ಪಿಲ್‌ಮೋರ್ ಬ್ರಿಟಿಷ್‌ ಡೆಪ್ಯುಟಿ ಹೈಕಮಿಷನರ್‌

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2019, 18:55 IST
Last Updated 5 ಅಕ್ಟೋಬರ್ 2019, 18:55 IST
ಜೆರಿಮಿ ಪಿಲ್‌ಮೋರ್
ಜೆರಿಮಿ ಪಿಲ್‌ಮೋರ್   

ಬೆಂಗಳೂರು: ಕರ್ನಾಟಕ ಮತ್ತು ಕೇರಳ ವ್ಯಾಪ್ತಿಯನ್ನು ಹೊಂದಿರುವ ಬ್ರಿಟಿಷ್‌ ಡೆಪ್ಯುಟಿ ಹೈಕಮಿಷನರ್‌ ಆಗಿ ಜೆರಿಮಿ ಪಿಲ್‌ಮೋರ್ ಅವರು ಇಲ್ಲಿ ಅಧಿಕಾರ ವಹಿಸಿಕೊಂಡಿದ್ದಾರೆ.

ಇದುವರೆಗೆ ಚೆನ್ನೈಯಲ್ಲಿ ಡೆಪ್ಯುಟಿ ಹೈಕಮಿಷನರ್‌ ಆಗಿದ್ದರು. ಎರಡೂ ರಾಜ್ಯಗಳು ಬ್ರಿಟನ್‌ನೊಂದಿಗೆ ಇನ್ನಷ್ಟು ಉತ್ತಮ ಆರ್ಥಿಕ, ಶೈಕ್ಷಣಿಕ ಮತ್ತು ಇತರ ಕ್ಷೇತ್ರಗಳಲ್ಲಿ ಸಂಬಂಧ ಸಾಧಿಸುವುದಕ್ಕೆ ತಾವು ಶಕ್ತಿ ಮೀರಿ ಶ್ರಮಿಸುವುದಾಗಿ ಅವರು ತಿಳಿಸಿದ್ದಾರೆ.

‘ಕಳೆದ ವರ್ಷ ಬ್ರಿಟನ್‌ನ ಒಟ್ಟು ಹೂಡಿಕೆಯಲ್ಲಿ ರಾಜ್ಯ ಶೇ 38ರಷ್ಟುನ್ನು ಪಡೆದುಕೊಂಡಿತ್ತು. ಬ್ರಿಟನ್‌ನಲ್ಲಿ ಸಹ ಭಾರತದ ತಂತ್ರಜ್ಞಾನ ಮತ್ತು ಟೆಲಿಕಾಂ ಕಂಪನಿಗಳು ದೊಡ್ಡ ಪ್ರಮಾಣದಲ್ಲಿ ಹೂಡಿಕೆ ಮಾಡಿವೆ. ಇದನ್ನು ಮುಂದುವರಿಸುವ ನಿಟ್ಟಿನಲ್ಲಿ ಸೇವೆ ಸಲ್ಲಿಸಲಿದ್ದೇನೆ’ ಎಂದು ಅವರು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.