ADVERTISEMENT

‘ಡ್ರಗ್ಸ್’ ಮತ್ತೇರಿಸಿಕೊಂಡಿದ್ದ ಚಾಲಕ ಬಂಧನ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2020, 22:37 IST
Last Updated 9 ಮಾರ್ಚ್ 2020, 22:37 IST

ಬೆಂಗಳೂರು: ಎಚ್‌ಬಿಆರ್ ಲೇಔಟ್‌ನ ನಡುರಸ್ತೆಯಲ್ಲೇ ಕಾರಿನಲ್ಲಿ ಕುಳಿತು ಡ್ರಗ್ಸ್ ಮತ್ತೇರಿಸಿಕೊಂಡಿದ್ದ ಆರೋಪದಡಿ ರೋಷನ್ ಜಮೀರ್ (36) ಎಂಬಾತನನ್ನು ಕೆ.ಜೆ.ಹಳ್ಳಿ ಪೊಲೀಸರು ಬಂಧಿಸಿದ್ದಾರೆ.

‘ಯಾಸೀನ್ ನಗರದ ನಿವಾಸಿಯಾದ ರೋಷನ್, ಎಚ್‌ಬಿಆರ್ ಲೇಔಟ್‌ನ 2ನೇ ಹಂತದ 8ನೇ ಮುಖ್ಯರಸ್ತೆಯಲ್ಲಿ ಕಾರು(ಕೆಎ 03 ಎಡಿ 1997) ನಿಲ್ಲಿಸಿಕೊಂಡು ಡ್ರಗ್ಸ್ ತೆಗೆದುಕೊಳ್ಳುತ್ತಿದ್ದ. ಅದನ್ನು ಸ್ಥಳೀಯ ನಿವಾಸಿಯೊಬ್ಬರು ಮೊಬೈಲ್‌ ಕ್ಯಾಮೆರಾದಲ್ಲಿ ಸೆರೆಹಿಡಿದು ಟ್ವಿಟರ್ ಖಾತೆಯಲ್ಲಿ ಅಪ್‌ಲೋಡ್‌ ಮಾಡಿದ್ದರು’ ಎಂದು ಪೊಲೀಸರು ಹೇಳಿದರು.

‘ವಿಡಿಯೊವನ್ನೇ ಆಧಾರವಾಗಿಟ್ಟುಕೊಂಡು ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ವಾಹನ ನೋಂದಣಿ ಸಂಖ್ಯೆ ಸುಳಿವು ಮೇರೆಗೆ ಆರೋಪಿಯನ್ನು ವಶಕ್ಕೆ ಪಡೆದು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಯಿತು. ಆತ ಡ್ರಗ್ಸ್ ತೆಗೆದುಕೊಂಡಿದ್ದು ಖಾತ್ರಿ ಆಯಿತು’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.