ADVERTISEMENT

ಟಿವಿಸಿಸಿಯಿಂದ ದೊಡ್ಡಯ್ಯ ಎತ್ತಂಗಡಿ

ಆರ್‌.ಆರ್‌.ನಗರ ಕ್ಷೇತ್ರದಲ್ಲಿ ₹118 ಕೋಟಿ ಅಕ್ರಮ

​ಪ್ರಜಾವಾಣಿ ವಾರ್ತೆ
Published 22 ಮೇ 2022, 19:26 IST
Last Updated 22 ಮೇ 2022, 19:26 IST

ಬೆಂಗಳೂರು: ರಾಜರಾಜೇಶ್ವರಿನಗರ ಕ್ಷೇತ್ರದ ವ್ಯಾಪ್ತಿಯಲ್ಲಿ ₹118 ಕೋಟಿ ಅಕ್ರಮದಲ್ಲಿ ಭಾಗಿಯಾದ ಆರೋಪವಿದ್ದಬಿಬಿಎಂಪಿ ಆಯುಕ್ತರ ತಾಂತ್ರಿಕ ಮತ್ತು ಜಾಗೃತ ಕೋಶದ (ಟಿವಿಸಿಸಿ) ಮುಖ್ಯ ಎಂಜಿನಿಯರ್‌ ದೊಡ್ಡಯ್ಯ ಎ.ಬಿ.ಅವರನ್ನು ಬಿಬಿಎಂಪಿ ಶನಿವಾರ ವರ್ಗಾಯಿಸಿದೆ.

ಕಳೆದ ವಾರವಷ್ಟೇ ಅವರಿಗೆಪಶ್ಚಿಮ ವಲಯದ ಮುಖ್ಯ ಎಂಜಿನಿಯರ್‌ ಹುದ್ದೆಯ ಪ್ರಭಾರಿಯನ್ನು ವಹಿಸ ಲಾಗಿತ್ತು. ಇದಕ್ಕೆ ಅಧಿಕಾರಿಗಳ ವಲಯದಲ್ಲಿ ಆಕ್ಷೇಪ ವ್ಯಕ್ತವಾಗಿತ್ತು.

ಮುಖ್ಯಮಂತ್ರಿಯ ನವ ನಗರೋತ್ಥಾನ ಯೋಜನೆಯಡಿರಾಜ ರಾಜೇಶ್ವರಿನಗರ ಕ್ಷೇತ್ರದಲ್ಲಿ ಮಂಜೂ ರಾಗಿದ್ದ ಕಾಮಗಾರಿಗಳನ್ನು ನಿರ್ವ ಹಿಸದೆ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮಕ್ಕೆ (ಕೆಆರ್‌ಐಡಿಎಲ್‌) ನಕಲಿ ಬಿಲ್ ಪಾವತಿಸಿ ಬೊಕ್ಕಸಕ್ಕೆ ₹118.26 ಕೋಟಿ ನಷ್ಟ ಉಂಟು ಮಾಡಿರುವುದು ಲೋಕಾಯುಕ್ತ ತನಿಖೆಯಿಂದ ಬಹಿರಂಗವಾಗಿತ್ತು.

ADVERTISEMENT

‘ಹಣಕಾಸು ಹಗರಣ, ಅವ್ಯವಹಾರಗಳನ್ನು ಪತ್ತೆ ಹಚ್ಚಲು ಬಿಬಿಎಂಪಿ ಯಲ್ಲಿ ಮುಖ್ಯ ಆಯುಕ್ತರ ತಾಂತ್ರಿಕ ಮತ್ತು ಜಾಗೃತ ಕೋಶ (ಟಿವಿಸಿಸಿ) ಸ್ಥಾಪಿಸಲಾಗಿದೆ. ‘ಕಾಮಗಾರಿಗಳನ್ನು ಅನುಷ್ಠಾನವೇ ಮಾಡದಿದ್ದರೂ, ಅವು ಅನುಷ್ಠಾನ ಆಗಿವೆ’ ಎಂದು ಟಿವಿಸಿಸಿ ಅಧಿಕಾರಿಗಳು ವರದಿ ನೀಡುವ ಮೂಲಕ ಬಿಲ್‌ ಪಾವತಿಗೆ ಸಹಕರಿಸಿರುವುದು ಲೋಕಾಯುಕ್ತ ತನಿಖೆಯಲ್ಲಿ ಗೊತ್ತಾಗಿತ್ತು.

ಪಾಲಿಕೆಯ ಮುಖ್ಯ ಎಂಜಿನಿಯರ್‌ (ಯೋಜನೆ–ಕೇಂದ್ರ) ಎಂ.ಲೋಕೇಶ್ ಅವರಿಗೆ ಹೆಚ್ಚುವರಿಯಾಗಿ ರಾಜಕಾಲುವೆ ವಿಭಾಗದ ಹೊಣೆ ವಹಿಸಲಾಗಿದೆ. ರಾಜಕಾಲುವೆ ವಿಭಾ ಗದ ಸುಗುಣಾ ಅವರನ್ನು ಕೆರೆಗಳು ವಿಭಾಗದ ಮುಖ್ಯ ಎಂಜಿನಿಯರ್‌ಆಗಿ ನಿಯೋಜಿಸಲಾಗಿದೆ. ವಿಜಯಕುಮಾರ್ ಹರಿದಾಸ್‌ ಅವರನ್ನು ಟಿವಿಸಿಸಿ ಮುಖ್ಯ ಎಂಜಿನಿಯರ್‌ ಆಗಿ ನೇಮಿಸಲಾಗಿದೆ.

ಕಳೆದ ವಾರ ಎರಡು ಗಂಟೆ ಸುರಿದಿದ್ದ ಮಳೆಗೆ ಹಲವು ಪ್ರದೇಶಗಳಲ್ಲಿ ಸಮಸ್ಯೆ ಉಂಟಾಗಿತ್ತು. ಇದಕ್ಕೆ ರಾಜಕಾಲುವೆ ನಿರ್ವಹಣೆಯ ಲೋಪವೇ ಕಾರಣ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಸಮಾಧಾನ ವ್ಯಕ್ತ ಪಡಿಸಿದ್ದರು. ಅದರ ಬೆನ್ನಲ್ಲೇ ಸುಗುಣಾ ಅವರನ್ನು ವರ್ಗಾವಣೆ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.