ADVERTISEMENT

ಬಾಲ್ಯವಿವಾಹ ಬಗ್ಗೆ ಪ್ರಜಾವಾಣಿ ವರದಿ ಫಲಶ್ರುತಿ– ಸ್ವಯಂ ಪ್ರೇರಿತ ದೂರು ದಾಖಲು

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2023, 21:15 IST
Last Updated 7 ಫೆಬ್ರುವರಿ 2023, 21:15 IST
   

ಬೆಂಗಳೂರು: ‘ಪ್ರಜಾವಾಣಿ’ ಫೆ.6 ಸಂಚಿಕೆಯ ಆಳ–ಅಗಲದಲ್ಲಿ ‘ಬಾಲ್ಯ ವಿವಾಹ ತಡೆ ಸರ್ಕಾರಕ್ಕೆ ಅಸಡ್ಡೆ, ಜನರಿಗೆ ಬೇಕಿಲ್ಲ’ ಶೀರ್ಷಿಕೆಯಲ್ಲಿ ಪ್ರಕಟವಾದ ವರದಿ ಆಧರಿಸಿ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದು, ಬಾಲ್ಯ ವಿವಾಹಗಳ ಕಟ್ಟುನಿಟ್ಟಿನ ತಡೆಗೆ ಇನ್ನಷ್ಟು ನಿಗಾವಹಿಸು
ವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಸಮಗ್ರ ಮಕ್ಕಳ ರಕ್ಷಣಾ ಸೊಸೈಟಿ ನಿರ್ದೇಶಕರಿಗೆ ಪತ್ರ ಬರೆದಿದೆ.

ರಾಜ್ಯದ 14 ಜಿಲ್ಲೆಗಳಲ್ಲಿ ಬಾಲ್ಯ ವಿವಾಹಪ್ರಕರಣಗಳಲ್ಲಿ ಏರಿಕೆ ಕಂಡುಬಂದಿವೆ. ಬಾಲ್ಯ ವಿವಾಹ ನಡೆಯುತ್ತಿ
ದ್ದರೂ, ಪ್ರಕರಣಗಳು ದಾಖಲಾಗುತ್ತಿಲ್ಲ. ಸರ್ಕಾರದ ಬಳಿ ನಿಖರ ಮಾಹಿತಿ ಇಲ್ಲ ಎನ್ನುವುದನ್ನು ‘ಪ್ರಜಾವಾಣಿ’ ಅಂಕಿ ಅಂಶಗಳ ಸಮೇತ ವರದಿ ಮಾಡಿದೆ. ಬಾಲ್ಯ ವಿವಾಹಗಳಿಗೆ ಆಸ್ಪದ ನೀಡಬಾರದು. ಗ್ರಾಮಮಟ್ಟದಿಂದಲೇ ತಡೆಗೆ ಶ್ರಮಿಸಬೇಕು. ಸಮಿತಿಗಳು ನಿರಂತರ ಜಾಗೃತಿಕಾರ್ಯಕ್ರಮಗಳನ್ನುಹಮ್ಮಿಕೊಳ್ಳಬೇಕು ಎಂದು ಆಯೋಗದ ಅಧ್ಯಕ್ಷ ನಾಗಣ್ಣಗೌಡ ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT