ADVERTISEMENT

ಒಪೆರಾ ಹೌಸ್‌ನಲ್ಲಿ ನಕ್ಕುನಲಿದ ಮಕ್ಕಳು

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2019, 20:15 IST
Last Updated 21 ಮಾರ್ಚ್ 2019, 20:15 IST
opera house
opera house   

ಬೆಂಗಳೂರಿನ ವಿವಿಧ ಸ್ವಯಂಸೇವಾ ಸಂಸ್ಥೆಗಳು ಮತ್ತು ಅನಾಥ ಆಶ್ರಮಗಳ 6–10 ವರ್ಷದ ಪುಟಾಣಿ ಬಾಲಕಿಯರು ಮಹಿಳಾ ದಿನಾಚರಣೆ ಅತಿಥಿಗಳಾಗುವ ಸೌಭಾಗ್ಯ ಸಿಕ್ಕಿತ್ತು. ಸ್ಯಾಮ್ಸಂಗ್‌ ಸಂಸ್ಥೆ ಮಕ್ಕಳಿಗೆ ಈ ಅಪರೂಪದ ಅವಕಾಶ ನೀಡಿತ್ತು. ಮಹಿಳಾ ದಿನದಂದು ಮಕ್ಕಳುಬ್ರಿಗೇಡ್‌ ರಸ್ತೆಯಲ್ಲಿರುವ ಸ್ಯಾಮ್ಸಂಗ್‌ ಕಂಪನಿಯ ಒಪೆರಾ ಹೌಸ್‌ ’ಎಕ್ಸ್‌ಪಿರಿಯನ್ಸ್‌ ಸೆಂಟರ್‌’ಗೆ ಭೇಟಿ ನೀಡಿದ್ದರು.

ವಯೋಸಹಜ ಅಚ್ಚರಿ ಮತ್ತು ಕುತೂಹಲದಿಂದ ಮಕ್ಕಳು ಸ್ಯಾಮ್ಸಂಗ್‌ ಇಲೆಕ್ಟ್ರಾನಿಕ್‌ಉತ್ಪನ್ನಗಳ ಬಗ್ಗೆ ಸಿಬ್ಬಂದಿಗೆ ಪ್ರಶ್ನೆಗಳನ್ನು ಎಸೆದರು. ದೊಡ್ಡ ಎಲ್‌ಇಡಿ ಪರದೆಗಳಲ್ಲಿ ವಿಆರ್‌ ಗೇಮ್‌ಗಳನ್ನು ಆಡಿ ನಲಿದರು. ಒಂದಿಡಿ ದಿನ ಎಕ್ಸ್‌ಪಿರಿಯನ್ಸ್‌ ಸೆಂಟರ್‌ನಲ್ಲಿ ಕುಣಿದು ಕುಪ್ಪಳಿಸಿದ ಮಕ್ಕಳೊಂದಿಗೆ ಸ್ಯಾಮ್ಸಂಗ್ ಸಿಬ್ಬಂದಿ ಕೂಡ ಮಕ್ಕಳಾಗಿದ್ದರು.

ಮಹಿಳೆಯರು ಮತ್ತು ಮಕ್ಕಳ ಹಕ್ಕುಗಳಿಗಾಗಿ ಕೆಲಸ ಮಾಡುವಸ್ವಯಂ ಸಂಸ್ಥೆಗಳಾದನೀಡ್‌ ಬೇಸ್‌ ಇಂಡಿಯಾದಜಾಲಹಳ್ಳಿ, ಶ್ರೀರಾಂಪುರ ಮತ್ತು ಹೂಡಿ ಶಾಖೆ, ವಿದ್ಯಾಮಂದಿರ ಕೋಡಿಹಳ್ಳಿ ಶಾಖೆ ಮತ್ತು ಹೋಪ್‌ ಪ್ರತಿಷ್ಠಾನದ ಪ್ಲಾನೆಟ್‌ ಹೋಪ್‌ನ ಕೊಥನೂರು, ಹೆಣ್ಣೂರು ಕ್ರಾಸ್‌ ಶಾಖೆಯ ಮಕ್ಕಳು ಒಪೆರಾ ಹೌಸ್‌ಗೆ ಭೇಟಿ ನೀಡಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.