ಕ್ರೈಸ್ಟ್ ವಿಶ್ವವಿದ್ಯಾಲಯದ ಆಯೋಜಿಸಿರುವ ವಿಜ್ಞಾನ ಮತ್ತು ತಂತ್ರಜ್ಞಾನ ಸಮ್ಮೇಳನದಲ್ಲಿ ಸಾರಲೇಖ ಸಂಚಿಕೆಯನ್ನು ಕುಲಸಚಿವ ಡಾ.ಅನಿಲ್ ಜೋಸೆಫ್ ಪಿಂಟೋ ಬಿಡುಗಡೆ ಮಾಡಿದರು.
ಬೆಂಗಳೂರು: ಕ್ರೈಸ್ಟ್ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಸೈನ್ಸ್ ಮತ್ತು ಭಾಷಾ ವಿಭಾಗದ ಜಂಟಿ ಸಹಯೋಗದೊಂದಿಗೆ ಎರಡು ದಿನಗಳ ವಿಜ್ಞಾನ ಮತ್ತು ತಂತ್ರಜ್ಞಾನ ಸಮ್ಮೇಳನಕ್ಕೆ ಗುರುವಾರ ಚಾಲನೆ ನೀಡಲಾಯಿತು.
ಇಂಧನ ಸುಸ್ಥಿರತೆ ಮತ್ತು ಹವಾಮಾನ ಬದಲಾವಣೆಗಳ ಕುರಿತ ಸಮ್ಮೇಳನದಲ್ಲಿ ಮಂಡನೆಯಾಗಲಿರುವ ವಿಷಯಗಳ ಸಾರಲೇಖ ಸಂಚಿಕೆಯನ್ನು ಕುಲಸಚಿವ ಡಾ.ಅನಿಲ್ ಜೋಸೆಫ್ ಪಿಂಟೋ ಬಿಡುಗಡೆ ಮಾಡಿದರು.
‘ಸುಸ್ಥಿರ ಭವಿಷ್ಯಕ್ಕಾಗಿ ಕಸದಿಂದ ರಸ’ ಕುರಿತ ಗೋಷ್ಠಿಯಲ್ಲಿ ಮಾತನಾಡಿದ ಡಾ.ಗುರುಮೂರ್ತಿ ಹೆಗ್ಡೆ, ದೇಶದ ಅಭಿವೃದ್ಧಿ, ನ್ಯಾನೊ ತಂತ್ರಜ್ಞಾನ, ದಕ್ಷಿಣ ಭಾರತದ ಪ್ರಮುಖ ವಾಣಿಜ್ಯ ಬೆಳೆ ಅಡಿಕೆ, ಈರುಳ್ಳಿಗಳಿಂದ ಬರುವ ತ್ಯಾಜ್ಯಗಳ ಮರುಬಳಕೆಯಿಂದಾಗುವ ಲಾಭದ ಬಗ್ಗೆ ವಿವರಿಸಿದರು.
ಸ್ಕೂಲ್ ಆಫ್ ಸೈನ್ಸ್‌ಸ್ ಡೀನ್ ಟಿ.ವಿ.ಜೋಸೆಫ್, ಭಾಷಾ ವಿಭಾಗದ ಮುಖ್ಯಸ್ಥೆ ಶ್ರೀಲತಾ, ಡಾ.ಪ್ರಾಣೇಶ್, ಕನ್ನಡ ಸಂಘದ ಸಂಚಾಲಕಿ ಡಾ.ಎಂ.ಟಿ.ರತಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.