ADVERTISEMENT

ಜನನಾಯಕರಾದ ಹಳೆ ವಿದ್ಯಾರ್ಥಿಗಳಿಗೆ ಗೌರವ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2025, 22:10 IST
Last Updated 1 ಮಾರ್ಚ್ 2025, 22:10 IST
ಜನನಾಯಕರಾಗಿ ಕಾರ್ಯನಿರ್ವಹಿಸುತ್ತಿರುವ ಹಳೆ ವಿದ್ಯಾರ್ಥಿಗಳನ್ನು ಗೌರವಿಸುವ ಕಾರ್ಯಕ್ರಮ ಕ್ರೈಸ್ಟ್‌ ವಿಶ್ವವಿದ್ಯಾಲಯದಲ್ಲಿ ಶನಿವಾರ ನಡೆಯಿತು.
ಜನನಾಯಕರಾಗಿ ಕಾರ್ಯನಿರ್ವಹಿಸುತ್ತಿರುವ ಹಳೆ ವಿದ್ಯಾರ್ಥಿಗಳನ್ನು ಗೌರವಿಸುವ ಕಾರ್ಯಕ್ರಮ ಕ್ರೈಸ್ಟ್‌ ವಿಶ್ವವಿದ್ಯಾಲಯದಲ್ಲಿ ಶನಿವಾರ ನಡೆಯಿತು.   

ಬೆಂಗಳೂರು: ಜನನಾಯಕರಾಗಿ ಕೆಲಸ ಮಾಡುತ್ತಿರುವ ಕ್ರೈಸ್ಟ್‌ ವಿಶ್ವವಿದ್ಯಾಲಯದ ಹಳೆ ವಿದ್ಯಾರ್ಥಿಗಳನ್ನು ಕ್ರೈಸ್ಟ್‌ ವಿಶ್ವವಿದ್ಯಾಲಯದಲ್ಲಿ ಶನಿವಾರ ಗೌರವಿಸಲಾಯಿತು.

ಸಂಸದರು, ಶಾಸಕರು, ಸಚಿವರು ಆಗಿರುವ ಎಂಟು ಸಾಧಕರಾದ ಸುಧಾಮೂರ್ತಿ, ಫ್ರಾನ್ಸಿಸ್‌ ಜಾರ್ಜ್‌, ಕೃಷ್ಣ ಬೈರೇಗೌಡ, ಮಲ್ಲೇಶ್‌ ಬಾಬು, ಶಿಲ್ಪಿ ನೇಹಾ ಟಿರ್ಕೆ, ಚಾಂಡಿ ಉಮ್ಮನ್‌, ದರ್ಶನ್‌ ಧ್ರುವನಾರಾಯಣ, ಸಾಗರ್‌ ಈಶ್ವರ್‌ ಖಂಡ್ರೆ ಗೌರವ ಸ್ವೀಕರಿಸಿದರು.

ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ವಿದ್ಯಾರ್ಥಿ ಜೀವನವನ್ನು ಮೆಲುಕು ಹಾಕಿದರು. ವಿಶ್ವವಿದ್ಯಾಲಯಗಳು ಚಿಂತನಾ ನಾಯಕರನ್ನು ತಯಾರು ಮಾಡಬೇಕು. ಕ್ರೈಸ್ಟ್‌ ವಿಶ್ವವಿದ್ಯಾಲಯವು ಅಂಥ ನಾಯಕರನ್ನು ತಯಾರು ಮಾಡುವುದರಲ್ಲಿ ಮುಂಚೂಣಿಯಲ್ಲಿದೆ ಎಂದು ಶ್ಲಾಘಿಸಿದರು.

ADVERTISEMENT

ರಾಜ್ಯಸಭೆ ಸದಸ್ಯೆ ಸುಧಾ ಮೂರ್ತಿ ಅವರು ಕ್ರೈಸ್ಟ್‌ ಸಂಸ್ಥೆಯಲ್ಲಿ ಬೋಧನೆ ಮಾಡುತ್ತಿದ್ದಾಗ ಸಿಕ್ಕಿದ ಪ್ರೀತಿ, ಗಳಿಸಿದ ಉತ್ಸಾಹ ಜೀವನವನ್ನು ಹೇಗೆ ಶ್ರೀಮಂತಗೊಳಿಸಿತು ಎಂದು ನೆನಪುಗಳನ್ನು ಹಂಚಿಕೊಂಡರು.

‘ಯಾವುದೇ ರಾಜಕೀಯ ಅನುಭವ ಇಲ್ಲದೇ ಇದ್ದ ಕಾಲದಲ್ಲಿ ರಾಜಕೀಯಕ್ಕೆ ಬರಬೇಕಾಯಿತು. ಕಾಲೇಜು ದಿನಗಳಲ್ಲಿ ರೂಪುಗೊಂಡ ಸ್ನೇಹದ ಬಂಧಗಳು ಕಷ್ಟಕಾಲದಲ್ಲಿ ನೆರವಾದವು’ ಎಂದು ಶಾಸಕ ಮಲ್ಲೇಶ್ ಬಾಬು ತಿಳಿಸಿದರು.

ಇಲ್ಲಿ ಕಲಿಯುವ ಸಮಯದಲ್ಲಿ ನಾನು ಮುಖ್ಯಮಂತ್ರಿಯ ಮಗ ತೋರಿಸಿಕೊಳ್ಳಲು ಅವಕಾಶ ಇಲ್ಲದಂತೆ ಎಲ್ಲ ವಿದ್ಯಾರ್ಥಿಗಳಂತೆ ನೋಡಿ ಕಲಿಸಿದರು ಎಂದು ಚಾಂಡಿ ಉಮ್ಮನ್‌ ಹೇಳಿದರು.

ಕ್ರೈಸ್ಟ್‌ ವಿಶ್ವವಿದ್ಯಾಲಯದಲ್ಲಿ ಕಲಿತ ಶಿಸ್ತು ಬದುಕಿನಲ್ಲಿ ಉಪಯೋಗವಾಯಿತು ಎಂದು ಶಾಸಕ ದರ್ಶನ ಧ್ರುವನಾರಾಯಣ ತಿಳಿಸಿದರು. ಸಂಸದ ಸಾಗರ್ ಈಶ್ವರ್ ಖಂಡ್ರೆ ಅವರು ಅತ್ಯಂತ ಕಿರಿಯ ಹಳೆಯ ವಿದ್ಯಾರ್ಥಿಯಾಗಿ ಪ್ರೇಕ್ಷಕರನ್ನು ಮೋಡಿ ಮಾಡಿದರು. 

ಕ್ರೈಸ್ಟ್‌ ಡೀಮ್ಡ್‌ ವಿಶ್ವವಿದ್ಯಾಲಯದ ಕುಲಪತಿ ಧರ್ಮಗುರು ಜೋಸ್‌ ಸಿ.ಸಿ. ಅಧ್ಯಕ್ಷತೆ ವಹಿಸಿದ್ದರು. ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಜುಗ್ನು ಓಬೆರಾಯ್‌ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.