ADVERTISEMENT

ಹವಾಮಾನ ಸಪ್ತಾಹ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2019, 19:36 IST
Last Updated 19 ಸೆಪ್ಟೆಂಬರ್ 2019, 19:36 IST

ಹವಾಮಾನ ಬಿಕ್ಕಟ್ಟಿನ ಬಗ್ಗೆ ಜಾಗೃತಿ ಮೂಡಿಸಲು ಪರಿಸರ ಪರವಾದ ಸಂಘ, ಸಂಸ್ಥೆಗಳು ಒಂದೇ ವೇದಿಕೆಯ ಅಡಿ ನಗರದಲ್ಲಿ ಸೆ.20ರಿಂದ 27ರವರೆಗೆ ‘ಜಾಗತಿಕ ಹವಾಮಾನ ಸಪ್ತಾಹ ಬೆಂಗಳೂರು–2019’ ಆಯೋಜಿಸಿವೆ.

ಫ್ರೈಡೇಸ್ ಫಾರ್ ಫ್ಯೂಚರ್ (ಎಫ್‌ಎಫ್‌ಎಫ್), ಎಕ್ಸ್‌ಟಿನ್ಷನ್‌ ರೆಬೆಲಿಯನ್‌ (ಎಕ್ಸ್‌ಆರ್‌) ಬೆಂಗಳೂರು ಹಾಗೂ ಜಟ್ಕಾ. ಆರ್ಗ್‌ ಪರಿಸರಪರ ಸಂಘಟನೆಗಳು ಒಟ್ಟಾಗಿ ವೈವಿಧ್ಯಮ ಪರಿಸರ ಜಾಗೃತ ಕಾರ್ಯಕ್ರಮಗಳನ್ನು ಆಯೋಜಿಸಿವೆ.

ಸಪ್ತಾಹದ ಅಂಗವಾಗಿ ಶಾಂತಿಯುತ ಪ್ರತಿಭಟನೆ, ಸಿನಿಮಾ ಪ್ರದರ್ಶನ, ಸಂವಾದ ಕಾರ್ಯಕ್ರಮ ಹಾಗೂ ಪರಿಸರ ಕುರಿತಾದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಎಫ್‌ಎಫ್‌ಎಫ್ ಸದಸ್ಯೆ ದಿಶಾ ಎಂ. ರವಿ ತಿಳಿಸಿದ್ದಾರೆ.

ADVERTISEMENT

ಸೆ.20ರಂದು ಟೌನ್‌ಹಾಲ್‌ ಮುಂಭಾಗದಿಂದ ಪ್ರತಿಭಟನಾ ಜಾಥಾ ಹಮ್ಮಿಕೊಳ್ಳಲಾಗಿದೆ. ಸೆ.21ರಂದು ಜಾಗತಿಕ ಸ್ವಚ್ಛತಾ ದಿನದ ಅಂಗವಾಗಿ ಬೆಳ್ಳಂದೂರು, ಕೆಂಗೇರಿ ಮತ್ತು ಕಲ್ಕೆರೆ ಕೆರೆಗಳ ಸ್ವಚ್ಛತಾ ಅಭಿಯಾನ ನಡೆಯಲಿದೆ. ಸೆ.22ರಂದು ಕೆಂಗೇರಿಯ ಗಣೇಶ ಆಟದ ಮೈದಾನ ಹಾಗೂ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ‘ಕ್ಲೈಮೆಟ್‌ ಕಲ್ಚರ್‌ ಫೆಸ್ಟ್‌’ ನಡೆಯಲಿದೆ.

ಸೆ.23ರಂದು ಇಂದಿರಾನಗರದ ಲಾಹೇ ಲಾಹೇ ಆಡಿಟೋರಿಯಂನಲ್ಲಿ ಪರಿಸರ ವಿಚಾರಕ್ಕೆ ಸಂಬಂಧಿಸಿದಂತೆ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ. ಪರಿಸರ ತಜ್ಞರಾದ ಯಲ್ಲಪ್ಪ ರೆಡ್ಡಿ, ಲಿಯೊ ಸಲ್ದಾನಾ, ಹರಿಣಿ ನಾಗೇಂದ್ರ, ಎಸ್‌. ವಿಶ್ವನಾಥ್‌, ವರುಣ್‌ ರವೀಂದ್ರನ್‌ ಭಾಗವಹಿಸಲಿದ್ದಾರೆ.

24ರಂದು ಇಂದಿರಾನಗರದ 91 ಸ್ಪ್ರಿಂಗ್‌ಬೋರ್ಡ್‌ನಲ್ಲಿ ‘ಕೌಸ್‌ಪೈರಸಿ ಎಚ್‌2ಒ’ ಸಿನಿಮಾ ಪ್ರದರ್ಶನವು ಸಂಜೆ 5ಕ್ಕೆ ನಡೆಯಲಿದೆ.

25ರಂದು ಪರಿಸರವಾದಿಗಳ ಸಮ್ಮಿಲನ ಹಾಗೂ ವಿಚಾರ ವಿನಿಮಿಯ ಕಾರ್ಯಕ್ರಮಗಳು ನಡೆಯಲಿವೆ. ಕೊನೆಯ ದಿನ 27ರಂದು ಪರಿಸರ ಮಾಲಿನ್ಯ ಕುರಿತಾಗಿ ಜನರಲ್ಲಿ ಜಾಗೃತಿ ಮೂಡಿಸಲು ಸಂಜೆ 4ಕ್ಕೆ ಕಬ್ಬನ್‌ ಪಾರ್ಕ್‌ನಿಂದ ಜಾಥಾ ನಡೆಸಲಾಗುತ್ತದೆ. ಮಾಹಿತಿಗೆ ಇನ್‌ಸ್ಟಾಗ್ರಾಮ್‌ ಲಿಂಕ್‌– fridaysforfuture.karnataka

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.