ADVERTISEMENT

ಮಾರಿಷಸ್‌ ಬಾಲಕಿಗೆ ಅಸ್ತಿಮಜ್ಜೆ ಕಸಿ

ಆಸ್ಟರ್ ಸಿಎಂಐ ಆಸ್ಪತ್ರೆ ವೈದ್ಯರಿಂದ ಚಿಕಿತ್ಸೆ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2019, 19:58 IST
Last Updated 13 ಮಾರ್ಚ್ 2019, 19:58 IST

ಬೆಂಗಳೂರು:‘ಕಾಂಪ್ಲಿಮೆಂಟ್ ಡಿಫಿಷಿಯನ್ಸಿ’ (ರೋಗ ಪ್ರತಿರೋಧ ವ್ಯವಸ್ಥೆಯ ನ್ಯೂನತೆ)ಯಿಂದಾಗಿ ವಿವಿಧ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗಿದ್ದ ಮಾರಿಷಸ್‌ ದೇಶದ 13 ವರ್ಷದ ಬಾಲಕಿಗೆನಗರದ ಆಸ್ಟರ್ ಸಿಎಂಐ ಆಸ್ಪತ್ರೆ ವೈದ್ಯರು ಅಸ್ತಿಮಜ್ಜೆ ಕಸಿ ನಡೆಸಿದ್ದಾರೆ.

ಇದೊಂದು ಅಪರೂಪದ ಆನುವಂಶಿಕ ಕಾಯಿಲೆಯಾಗಿದ್ದು, ಈವರೆಗೂ ವಿಶ್ವದಲ್ಲಿ ಇದಕ್ಕೆ ಸೂಕ್ತ ಚಿಕಿತ್ಸೆ ಪಡೆದಿರುವ ಹತ್ತಕ್ಕೂ ಕಡಿಮೆ ಮಂದಿಯಲ್ಲಿ ಈ ಬಾಲಕಿಯೂ ಒಬ್ಬಳು. ಏಷ್ಯಾದಲ್ಲಿಯೇ ಪ್ರಥಮ ಮೊದಲ ಬಾಲಕಿ ಎಂದು ಆಸ್ಪತ್ರೆಯ ಇಮ್ಯುನಾಲಜಿ ಮತ್ತು ರುಮಟಾಲಜಿ ವಿಭಾಗದ ಸಲಹಾ ತಜ್ಞ ಡಾ.ಸಾಗರ್ ಭಟ್ಟಾದ್ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘2014ರಲ್ಲಿ ಬ್ರಿಟನ್‌ನಲ್ಲಿ ಮೊದಲ ಬಾರಿಗೆ ಕಾಂಪ್ಲಿಮೆಂಟ್ ಡಿಫಿಷಿಯನ್ಸಿಗೆ ಅಸ್ಥಿಮಜ್ಜೆ ಕಸಿ ಚಿಕಿತ್ಸೆ ಮಾಡಲಾಗಿತ್ತು’ ಎಂದರು.

ADVERTISEMENT

‘ಬೋಲಾ ಅಬ್ದುಲ್ ಮತ್ತು ನಜೀರಾ ಬೋಲಾ ದಂಪತಿಯ ಮಗಳು ಸಿಯಾರ(ಹೆಸರು ಬದಲಿಸಲಾಗಿದೆ), 3 ವರ್ಷದವಳಿದ್ದಾಗಿನಿಂದ ಈ ಸಮಸ್ಯೆಗೆ ಒಳಗಾಗಿದ್ದಳು. ಹತ್ತು ವರ್ಷಗಳಿಂದ ಚರ್ಮದ ಸೋಂಕು, ಶ್ವಾಸಕೋಶದ ಸೋಂಕು, ಉಸಿರಾಟದ ಸಮಸ್ಯೆ ಸೇರಿದಂತೆ ಹಲವು ತೊಂದರೆಗಳನ್ನು ಅನುಭವಿಸಿದ್ದಳು. ಇದಕ್ಕಾಗಿ ಮಾರಿಷಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಅದು ಫಲಕಾರಿಯಾಗದ ಕಾರಣ ಬಾಲಕಿಯನ್ನುಆಸ್ಟರ್ ಸಿಎಂಐ ಆಸ್ಪತ್ರೆಗೆ ಕರೆ ತರಲಾಯಿತು’ ಎಂದು ತಿಳಿಸಿದರು.

‘ತಂದೆಯ ಅಸ್ತಿಮಜ್ಜೆ ಪಡೆದುಬಾಲಕಿಗೆ ಕಸಿ ಮಾಡಲಾಗಿದೆ. ಆರು ತಿಂಗಳಲ್ಲಿ ಸಂಪೂರ್ಣ ಗುಣ ಹೊಂದಲಿದ್ದಾಳೆ’ ಎಂದು ವೈದ್ಯರು ಹೇಳಿದರು.

ಡಾ.ಸ್ಟಾಲಿನ್ ಮಾತನಾಡಿ, ‘ಪ್ರತಿ 2 ಸಾವಿರ ಮಂದಿಯಲ್ಲಿ ಒಬ್ಬರು ಇಂಥ ಸಮಸ್ಯೆಗೆ ಒಳಗಾಗುತ್ತಾರೆ. ಬೆಂಗಳೂರಿನ ಜನಸಂಖ್ಯೆಗೆ ಹೋಲಿಸಿದರೆ 5 ಸಾವಿರ ಮಂದಿಯಲ್ಲಿ ಈ ಸಮಸ್ಯೆ ಇರುತ್ತದೆ. ಆದರೆ, ಇದನ್ನು ಸರಿಯಾಗಿ ಗುರುತಿಸಿ ಚಿಕಿತ್ಸೆ ನೀಡುವ ಅಗತ್ಯವಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.