ADVERTISEMENT

ಶಿವರಾಜ್ ಪಾಟೀಲ ಪ್ರತಿಷ್ಠಾನದಿಂದ ಸಿಎನ್‌ಆರ್ ರಾವ್‌ಗೆ ಶಿವಶ್ರೀ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2025, 19:38 IST
Last Updated 27 ನವೆಂಬರ್ 2025, 19:38 IST
ಸಿಎನ್‌ಆರ್‌ ರಾವ್‌
ಸಿಎನ್‌ಆರ್‌ ರಾವ್‌   

ಬೆಂಗಳೂರು: ನ್ಯಾ.ಶಿವರಾಜ್ ವಿ. ಪಾಟೀಲ ಪ್ರತಿಷ್ಠಾನದಿಂದ ನೀಡುವ 2025ನೇ ಸಾಲಿನ ಶಿವಶ್ರೀ ಪ್ರಶಸ್ತಿಗೆ ವಿಜ್ಞಾನಿ ಸಿಎನ್‌ಆರ್ ರಾವ್ ಅವರು ಭಾಜನರಾಗಿದ್ದಾರೆ.

ನಗರದ ಪ್ಯಾಲೇಸ್ ರಸ್ತೆಯಲ್ಲಿರುವ ಕಿಂಗ್ಸ್‌ಕೋರ್ಟ್ ಮಿನಿಹಾಲ್‌ನಲ್ಲಿ ನ.29ರಂದು ಬೆಳಿಗ್ಗೆ 10.30ಕ್ಕೆ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲಾಗಿದೆ.

ಸುಪ್ರೀಂಕೋರ್ಟ್‌ನ ವಿಶ್ರಾಂತ ಮುಖ್ಯ ನ್ಯಾಯಮೂರ್ತಿ ಉದಯ್ ಉಮೇಶ್ ಲಲಿತ್ ಪ್ರಶಸ್ತಿ ಪ್ರದಾನ ಮಾಡುವರು. ವಿಶ್ರಾಂತ ನ್ಯಾಯಮೂರ್ತಿ ಶಿವರಾಜ್ ವಿ. ಪಾಟೀಲ ಅಧ್ಯಕ್ಷತೆ ವಹಿಸುವರು. ಹಿರಿಯ ನ್ಯಾಯವಾದಿ ಉದಯಹೊಳ್ಳ ಅತಿಥಿಯಾಗಿ ಭಾಗವಹಿಸುವರು ಎಂದು ಪ್ರತಿಷ್ಠಾನದ ದಾವಣಗೆರೆ ಜಿಲ್ಲಾ ಸಂಚಾಲಕ ಎಲ್.ಎಚ್. ಅರುಣ್‌ಕುಮಾರ್ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.