ADVERTISEMENT

ಅಂಚೆ ಕಚೇರಿಯಲ್ಲಿ ಪಾರ್ಸಲ್‌ ಕಳವು

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2019, 19:58 IST
Last Updated 12 ಡಿಸೆಂಬರ್ 2019, 19:58 IST

ಬೆಂಗಳೂರು: ಇಲ್ಲಿನ ಪ್ರಧಾನ ಅಂಚೆ ಕಚೇರಿಯ ಪಾರ್ಸಲ್‌ ವಿಂಗಡಣಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಗುತ್ತಿಗೆ ನೌಕರ ಮಹೇಶ್‌ ಕುಮಾರ್‌ ಎಂಬುವರು ಗ್ರಾಹಕರಿಗೆ ವಿತರಿಸಬೇಕಿದ್ದ ಬೆಲೆಬಾಳುವ ವಸ್ತುಗಳನ್ನು ಕಳವು ಮಾಡಿದ್ದಾರೆ ಎಂದು ಆರೋಪಿಸಿ ವಿಧಾನಸೌಧ ಪೊಲೀಸರಿಗೆ ದೂರು ನೀಡಲಾಗಿದೆ.

ಖಾಸಗಿ ಕಂಪನಿ ಮೂಲಕ ನೇಮಕವಾಗಿದ್ದ ಮಹೇಶ್‌ ಕುಮಾರ್ ಜೂನ್‌ 26ರಿಂದ ಅಕ್ಟೋಬರ್‌ 30ರವರೆಗೆ ಸುಮಾರು 15 ಪಾರ್ಸಲ್‌ಗಳಲ್ಲಿದ್ದ ಬೆಲೆ ಬಾಳುವ ವಸ್ತುಗಳನ್ನು ಕಳವು ಮಾಡಿದ್ದರು. ಇದರಲ್ಲಿ ಮೊಬೈಲ್ ಫೋನ್‌, ಕ್ಯಾಮೆರಾ ಸೇರಿವೆ ಎಂದು ಪ್ರಧಾನ ಅಂಚೆ ಕಚೇರಿ ಹಿರಿಯ ಅಧಿಕಾರಿ ಶೆಫಿ ಎಂಬುವರು ದೂರಿನಲ್ಲಿ ತಿಳಿಸಿದ್ದಾರೆ. ‌ಗ್ರಾಹಕರಿಗೆ ಬಂದಿದ್ದ ಪಾರ್ಸಲ್‌ಗಳು ವಿತರಣೆ ಆಗದ ಕುರಿತು ದೂರುಗಳು ಬಂದಿದ್ದವು. ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯಾವಳಿ ಪರಿಶೀಲಿಸಿದಾಗ ಮಹೇಶ್‌ ಕಳವು ಮಾಡಿರುವುದು ಪತ್ತೆಯಾಗಿದೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT