ADVERTISEMENT

ಕಾರ್ಯವೈಖರಿ ಮೆಚ್ಚಿ ಕಾನ್‌ಸ್ಟೆಬಲ್‌ಗೆ ಕಮಲ್ ಪಂತ್ ಸನ್ಮಾನ

​ಪ್ರಜಾವಾಣಿ ವಾರ್ತೆ
Published 22 ಜುಲೈ 2021, 3:28 IST
Last Updated 22 ಜುಲೈ 2021, 3:28 IST
ಕಾನ್‌ಸ್ಟೆಬಲ್ ಶಿವಕುಮಾರ್ ಅವರನ್ನು ಸನ್ಮಾನಿಸಿದ ಕಮಲ್ ಪಂತ್.
ಕಾನ್‌ಸ್ಟೆಬಲ್ ಶಿವಕುಮಾರ್ ಅವರನ್ನು ಸನ್ಮಾನಿಸಿದ ಕಮಲ್ ಪಂತ್.   

ಬೆಂಗಳೂರು: ಬಕ್ರೀದ್‌ಗಾಗಿ ನಗರದಲ್ಲಿ ಬಂದೋಬಸ್ತ್‌ ಪರಿಶೀಲಿಸಲು ತೆರಳಿದ್ದ ನಗರ ಪೊಲೀಸ್ ಕಮಿಷನರ್ ಕಮಲ್ ಪಂತ್, ಕೆ.ಜಿ.ಹಳ್ಳಿ ಠಾಣೆಯ ಕಾನ್‌ಸ್ಟೆಬಲ್‌ವೊಬ್ಬರ ಕಾರ್ಯವೈಖರಿ ಮೆಚ್ಚಿ ಸನ್ಮಾನಿಸಿದರು.

ಕೆ.ಜಿ.ಹಳ್ಳಿ ಠಾಣೆಯ ಗುಪ್ತಚರ ವಿಭಾಗದ ಕಾನ್‌ಸ್ಟೆಬಲ್ಶಿವಕುಮಾರ್ ಅವರನ್ನು ಸನ್ಮಾನಿಸಲಾಯಿತು.

ಬಕ್ರೀದ್‌ ಪೂರ್ವಭಾವಿಯಾಗಿ ಮಂಗಳವಾರ ರಾತ್ರಿ ಕೋರಮಂಗಲ, ಬಾಣಸವಾಡಿ, ಚಾಮರಾಜಪೇಟೆ, ಜಯನಗರ,ಹೆಣ್ಣೂರು, ಪಾದರಾಯನಪುರ, ಗೋವಿಂದನಗರ, ಶಿವಾಜಿನಗರ ಸೇರಿದಂತೆ ಹಲವು ಠಾಣೆಗಳಿಗೆ ಬಂದೋಬಸ್ತ್‌ ಪರಿಶೀಲನೆಗೆ ಕಮಲ್ ಪಂತ್ ತೆರಳಿದ್ದರು.

ADVERTISEMENT

ಈ ವೇಳೆ ಕೆ.ಜಿ.ಹಳ್ಳಿ ಠಾಣೆಯ ಬಳಿ ಮುಸ್ಲಿಂ ಸಮುದಾಯದ ಮುಖಂಡರು ಶಾಲು, ಹಾರದೊಂದಿಗೆ ಪಂತ್ ಅವರನ್ನು ಸನ್ಮಾನಿಸಲು ಮುಂದಾದರು.

‘ಸನ್ಮಾನ ಮಾಡಬೇಕಿರುವುದು ನನಗೆ ಅಲ್ಲ. ಸದಾ ಕರ್ತವ್ಯದಲ್ಲಿರುವ ಪೊಲೀಸ್ ಸಿಬ್ಬಂದಿಗೆ’ ಎಂದು ಪ್ರತಿಕ್ರಿಯಿಸಿದ ಅವರು, ಠಾಣೆಯಲ್ಲಿ ಉತ್ತಮವಾಗಿ ಕೆಲಸ ಮಾಡುವ ಸಿಬ್ಬಂದಿ ಯಾರೆಂದು ಹಿರಿಯ ಅಧಿಕಾರಿಗಳನ್ನು ಕೇಳಿದರು.

ಈ ವೇಳೆ ಕಾನ್‌ಸ್ಟೆಬಲ್ ಶಿವಕುಮಾರ್ ಹೆಸರನ್ನು ಅಧಿಕಾರಿಗಳು ಸೂಚಿಸಿದ್ದರು.ಆಗ ಮುಖಂಡರು ತಂದಿದ್ದ ಶಾಲು ಹೊದಿಸಿ, ಹಾರ ಹಾಕಿ ಶಿವಕುಮಾರ್ ಅವರನ್ನು ಸನ್ಮಾನಿಸಿದರು.

‘ಕಮಲ್ ಪಂತ್ ಅವರಿಂದ ಅನಿರೀಕ್ಷಿತವಾಗಿ ಸನ್ಮಾನ ಮಾಡಿಸಿಕೊಂಡಿದ್ದು ಸಂತಸ ತಂದಿದೆ. ಕರ್ತವ್ಯದಲ್ಲಿ ಇನ್ನಷ್ಟು ಜವಾಬ್ದಾರಿ ಹೆಚ್ಚಾಗಿದೆ’ ಎಂದು ಶಿವಕುಮಾರ್ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.